Friday, April 26, 2024
spot_imgspot_img
spot_imgspot_img

ಭಾರತದ ಮೊದಲ ಖಾಸಗಿ ರಾಕೆಟ್‌ ವಿಕ್ರಮ್-ಎಸ್ ಇಂದು ಉಡಾವಣೆ

- Advertisement -G L Acharya panikkar
- Advertisement -

ಆಂಧ್ರಪ್ರದೇಶ: ಖಾಸಗಿ ಕಂಪನಿ ತಯಾರಿಸಿದ ರಾಕೆಟ್ ವಿಕ್ರಮ್ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತಯಾರಾಗಿದ್ದು, ಇಂದು ಬೆಳಗ್ಗೆ 11:30ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಯಾಗಲಿದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.

ಇಸ್ರೋ ಸಂಸ್ಥಾಪಕ ವಿಕ್ರಮ್ ಸಾರಾಭಾಯಿ ಸ್ಮರಣಾರ್ಥ ಸ್ಕೈರೂಟ್ ಸಂಸ್ಥೆ ರಾಕೆಟ್‌ಗೆ ವಿಕ್ರಮ್ ಎಂದು ಹೆಸರಿಟ್ಟಿದ್ದು, ವಿಕ್ರಮ್ ಸೀರಿಸ್‌ನಲ್ಲಿ ಒಟ್ಟಾರೆ ಮೂರು ರಾಕೆಟ್‌ಗಳಿವೆ.

ಇನ್ನು ವಿಕ್ರಮ್-ಎಸ್ ರಾಕೆಟ್ ಇದಾಗಿದ್ದು, ಮೂರು ಚಿಕ್ಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ಯಲಿದೆ. ವಿಕ್ರಮ್ ಮೂಲಕ ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಖಾಸಗಿ ಕಂಪನಿಗಳ ಪ್ರವೇಶವಾಗಿದೆ. ಇಂದು ಬೆಳ್ಳಗ್ಗೆ 11:30ಕ್ಕೆ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆಯಾಗಲಿದೆ.

vtv vitla
- Advertisement -

Related news

error: Content is protected !!