Friday, July 24, 2026
spot_imgspot_img
spot_imgspot_img

ಭಾರತೀಯ ಮಜ್ದೂರ್ ಸಂಘ ವಿಟ್ಲ ವತಿಯಿಂದ ಕಟ್ಟಡ ಕಾರ್ಮಿಕ ಸಮಾವೇಶ ಹಾಗೂ ಸುರಕ್ಷಾ ಕಿಟ್ ವಿತರಣಾ ಕಾರ್ಯಕ್ರಮ; ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -
driving

ಭಾರತೀಯ ಮಜ್ದೂರ್ ಸಂಘ ವತಿಯಿಂದ ವಿಟ್ಲ ವಲಯದಲ್ಲಿ ಕಟ್ಟಡ ಕಾರ್ಮಿಕ ಸಮಾವೇಶ ಹಾಗೂ ಸುರಕ್ಷಾ ಕಿಟ್ ವಿತರಣಾ ಕಾರ್ಯಕ್ರಮ ಸರ್ಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ‌ಜರುಗಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ‌ಮಜ್ದೂರ್ ಸಂಘದ ಹಿರಿಯ ‌ನಾಯಕರಾದ ವಿಶ್ವನಾಥ ಶೆಟ್ಟಿ ಅವರು ವಹಿಸಿದ್ದರು. ಬಿಎಂಎಸ್ ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಕಟ್ಟಡ ಕಾರ್ಮಿಕ ಮಜ್ದೂರ್ ಸಂಘ ಜಿಲ್ಲಾ‌ ಸಂಘಟನಾ ಕಾರ್ಯದರ್ಶಿ ಕಿರಣ್ ರಾವ್, ಮೋಟಾರ್ ಜನರಲ್ ಮಜ್ದೂರ್ ಸಂಘದ ಸಂಘಟನಾ ಕಾರ್ಯದರ್ಶಿ ಅಶೋಕ್ ಕುಮಾರ್ ಅಡ್ಯನಡ್ಕ ಉಪಸ್ಥಿತರಿದ್ದರು. ರಾಜೇಶ್ ವಿಟ್ಲ ಸ್ವಾಗತಿಸಿ ಹರೀಶ್ ವಿಟ್ಲ ನಿರೂಪಿಸಿ ಜಯಪ್ರಕಾಶ್ ಕೆಲಿಂಜ ವಂದಿಸಿದರು.

ಭಾರತೀಯ ಮಜ್ದೂರ್ ಸಂಘ (BMS) ಗೆ ಸಂಯೋಜಿಸಲ್ಪಟ್ಟ ಕಟ್ಟಡ ಕಾರ್ಮಿಕರ ಸಂಘ ವಿಟ್ಲ ತಾಲೂಕಿನ ನೂತನ ಪದಾಧಿಕಾರಿಗಳು:

ಅಧ್ಯಕ್ಷರು – ರಾಜೇಶ್ ಬೊಬ್ಬೆಕೇರಿ
ಉಪಾಧ್ಯಕ್ಷರು – ನಾಗೇಶ್ ಜೋಗಿಮಠ, ರಾಜೇಶ್ ಆಲಂಗಾರು
ಕಾರ್ಯದರ್ಶಿ – ಸಂದೇಶ್ ಕೆಲಿಂಜ
ಕೋಶಾಧಿಕಾರಿ – ಧನಂಜಯ ಶಿವಾಜಿನಗರ
ಸಂಘಟನಾ ಕಾರ್ಯದರ್ಶಿ – ಸಂತೋಷ್ ಕೆಲಿಂಜ, ಜಯಂತ ಗಾಳಿಹಿತ್ಲು

- Advertisement -

Related news

error: Content is protected !!