Monday, April 29, 2024
spot_imgspot_img
spot_imgspot_img

ಭಾರತ-ಚೀನಾ ನಡುವೆ 11ನೇ ಸುತ್ತಿನ ಮಾತುಕತೆ: ಹೊಸ ಸಮಸ್ಯೆಗಳಿಗೆ ಅವಕಾಶ ಮಾಡಿಕೊಡದಂತೆ ಎಚ್ಚರ ವಹಿಸಲು ಒಪ್ಪಂದ

- Advertisement -G L Acharya panikkar
- Advertisement -

ನವದೆಹಲಿ: ಭಾರತ-ಚೀನಾ ನಡುವೆ 11ನೇ ಸುತ್ತಿನ ಮಾತುಕತೆ ನಡೆದಿದ್ದು ಎರಡೂ ದೇಶಗಳು ಪೂರ್ವ ಲಡಾಖ್​ನಲ್ಲಿ ಹೊಸ ಸಮಸ್ಯೆಗಳು ತಲೆದೋರದಂತೆ ಎಚ್ಚರಿಕೆ ವಹಿಸುವುದಕ್ಕೆ ಒಪ್ಪಿವೆ ಎನ್ನಲಾಗಿದೆ.

ಭಾರತದ ಕಡೆಯ ಚುಹ್ಸುಲ್ ಬಾರ್ಡರ್​ ಬಳಿ ಈ ಮಾತುಕತೆ ನಡೆದಿದೆ. ಕಾರ್ಪ್ಸ್ ಕಮಾಂಡರ್ ಮಟ್ಟದ ಈ ಸಭೆಯಲ್ಲಿ ಸದ್ಯ ವಾಸ್ತವದಲ್ಲಿರುವ ಸಮಸ್ಯೆಗಳನ್ನು ಎರಡೂ ದೇಶಗಳು ಸ್ನೇಹದ ಮಾದರಿಯಲ್ಲಿ ಬಗೆಹರಿಸಿಕೊಳ್ಳಲು ಒಪ್ಪಿಕೊಂಡಿವೆ ಎಂದು ಭಾರತೀಯ ಸೇನೆ ಹೇಳಿದೆ.

ಎರಡೂ ದೇಶಗಳ ನಡುವೆ ವಿವರವಾದ ಮಾತುಕತೆ ನಡೆದಿದೆ. ಉಳಿದಿರುವ ವಿಚಾರಗಳನ್ನ ಸ್ನೇಹದಿಂದ ಪರಿಹರಿಸಿಕೊಳ್ಳುವುದು. ಗಡಿಯಲ್ಲಿ ಹೊಸ ಸಮಸ್ಯೆಗಳು ತಲೆದೋರದಂತೆ ಎಚ್ಚರ ವಹಿಸುವ ಕುರಿತು ಈ ಸಭೆಯಲ್ಲಿ ಒಪ್ಪಂದಕ್ಕೆ ಬರಲಾಗಿದೆ ಎಂದು ತಿಳಿಸಿದೆ.

- Advertisement -

Related news

error: Content is protected !!