Wednesday, May 15, 2024
spot_imgspot_img
spot_imgspot_img

ಭಾರತ ವಿರೋಧಿ ಪೋಸ್ಟ್‌ ಮಾಡಿದ 35 ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳಿಗೆ ನಿರ್ಬಂಧ

- Advertisement -G L Acharya panikkar
- Advertisement -

ನಕಲಿ ಸುದ್ದಿ ಮತ್ತು ಭಾರತ ವಿರೋಧಿ ವಿಷಯವನ್ನು ಪೋಸ್ಟ್ ಮಾಡಿದ 18 ಭಾರತೀಯ ಮತ್ತು ನಾಲ್ಕು ಪಾಕಿಸ್ತಾನ ಮೂಲದ ಯೂಟ್ಯೂಬ್ ಸುದ್ದಿ ಚಾನೆಲ್‌ಗಳನ್ನು ಮೊದಲ ಬಾರಿಗೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿರ್ಬಂಧಿಸಿದೆ. 35 ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳು ಮತ್ತು ಎರಡು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದ ತಿಂಗಳುಗಳ ನಂತರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇದೀಗ 22 ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳು ಮತ್ತು ಬಹು ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲು ಆದೇಶಿಸಿದೆ.

ಈ ಯೂಟ್ಯೂಬ್ ಚಾನಲ್ ಗಳು ವೀಕ್ಷಕರನ್ನು ದಾರಿತಪ್ಪಿಸಲು ಟಿವಿ ನ್ಯೂಸ್ ಚಾನೆಲ್‌ಗಳ ಲೋಗೋಗಳು ಮತ್ತು ಸುಳ್ಳು ಥಂಬ್ ನೇಲ್‌ಗಳನ್ನು ಬಳಸಿಕೊಂಡು ಸುಳ್ಳುಸುದ್ದಿ ಪ್ರಸಾರ ಮಾಡಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇವು ಭಾರತೀಯ ಸಶಸ್ತ್ರ ಪಡೆಗಳು, ಜಮ್ಮು ಮತ್ತು ಕಾಶ್ಮೀರದಂತಹ ವಿವಿಧ ವಿಷಯಗಳ ಕುರಿತು ನಕಲಿ ಸುದ್ದಿಗಳನ್ನು ಹಂಚಲು ಮತ್ತು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುವ ಬಹು ಸಾಮಾಜಿಕ ಮಾಧ್ಯಮ ಖಾತೆಗಳಿಂದ ಹಂಚಿಕೊಳ್ಳಲಾದ ಭಾರತ ವಿರೋಧಿ ವಿಷಯವನ್ನು ಪೋಸ್ಟ್ ಮಾಡಲು ಬಳಸಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಪರಿಸ್ಥಿತಿಗೆ ಸಂಬಂಧಿಸಿದಂತೆ ಈ ಭಾರತೀಯ ಯೂಟ್ಯೂಬ್ ಆಧಾರಿತ ಚಾನೆಲ್‌ಗಳು ಪ್ರಕಟಿಸಿದ ಸುಳ್ಳು ವಿಷಯವನ್ನು ಗಮನಿಸಲಾಗಿದೆ ಮತ್ತು ಇತರ ದೇಶಗಳೊಂದಿಗೆ ಭಾರತದ ವಿದೇಶಿ ಸಂಬಂಧಗಳಿಗೆ ಧಕ್ಕೆ ತರುವ ಗುರಿಯನ್ನು ಹೊಂದಿದೆ’ ಎಂದು ಅದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.

- Advertisement -

Related news

error: Content is protected !!