Wednesday, May 22, 2024
spot_imgspot_img
spot_imgspot_img

ಭಾರಿ ಟ್ರೆಂಡಿಂಗ್ ಆಗುತ್ತಿದೆ ಪ್ರಧಾನಿ ಮೋದಿ ರಾಜೀನಾಮೆ ಹ್ಯಾಶ್​ಟ್ಯಾಗ್

- Advertisement -G L Acharya panikkar
- Advertisement -

ಶ್ರೀಲಂಕಾ, ಅದಾನಿ ಸಮಸ್ಯೆಯ ಮೇಲೆ ಆರಂಭವಾಗಿದ್ದ #ModiMustResign ಹ್ಯಾಶ್​ಟ್ಯಾಗ್​, ಇದೀಗ ಮತ್ತೆ ಟ್ವಿಟರ್​ನಲ್ಲಿ ಟ್ರೆಂಡ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆಯ ಹ್ಯಾಶ್​ಟ್ಯಾಗ್ ಬಳಸಿ ಅನೇಕರು ಟ್ವೀಟ್ ಮಾಡುತ್ತಿದ್ದಾರೆ. ಗುರುವಾರ ಆರಂಭವಾದ #ModiMustResign ಎಂಬ ಹ್ಯಾಶ್‌ಟ್ಯಾಗ್ ಇನ್ನೂ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಇದಕ್ಕೆ ಕೇಂದ್ರ ಸರ್ಕಾರ ಜಾರಿ ಮಾಡಿದ ಅಗ್ನಿಪಥ್ ಯೋಜನೆ ಕೂಡ ರಾಜೀನಾಮೆ ಒತ್ತಾಯದ ಕಾರಣಗಳಲ್ಲಿ ಒಂದಾಗಿದೆ.

ಅಗ್ನಿಪಥ್ ಯೋಜನೆ ಬಗ್ಗೆ ನೆಟ್ಟಿಗರು ಹಾಗೂ ಸೇನಾ ಅಭ್ಯರ್ಥಿಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಯೋಜನೆ ವಿರೋಧಿಸಿ ಭಾರತದಾದ್ಯಂತ ಹಲವಾರು ರಾಜ್ಯಗಳಲ್ಲಿ ಸರ್ಕಾರದ ವಿರುದ್ಧ ಆಂದೋಲನಗಳು ಮತ್ತು ಪ್ರತಿಭಟನೆಗಳನ್ನು ಮಾಡಲಾಗುತ್ತಿದೆ. ಆಂದೋಲನದ ವಿಡಿಯೋ ಹಂಚಿಕೊಂಡ ನೆಟ್ಟಿಗರೊಬ್ಬರು, “ಸರ್ಕಾರ ತೆಗೆದುಕೊಂಡ ಕೆಟ್ಟ ಹೆಜ್ಜೆ. ಲಕ್ಷಗಟ್ಟಲೆ ಯುವಕರ ಬದುಕನ್ನು ಹಾಳುಮಾಡಿದೆ” ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗ ಮೋದಿಯ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು, “ಈಗ ಆಂಧಭಕ್ತರು, ‘ಮೋದಿಜಿ ನೆ ಕಿಯಾ ಹೈ ತೋ ಸೋಚ್ ಸಮಾಜ್ ಕರ್ ಕಿಯಾ ಹೋಗಾ‘ ಎಂದು ಹೇಳುತ್ತಾರೆ ಎಂಬ ಪೋಸ್ಟರ್ ಹಂಚಿಕೊಂಡಿದ್ದಾರೆ.

ಮತ್ತೆ ಕೆಲವರು ಇಂಧನ ಬೆಲೆ ಏರಿಕೆ, ದೈನಂದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ, ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಪೋಸ್ಟರ್ ಹಂಚಿಕೊಂಡು ಮೋದಿ ರಾಜೀನಾಮೆ ಹ್ಯಾಶ್​ಟ್ಯಾಗ್ ಹಾಕಿದ್ದಾರೆ.

- Advertisement -

Related news

error: Content is protected !!