- Advertisement -
- Advertisement -




ಶಿರ್ವ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರನ್ನು ಶಿರ್ವ ಠಾಣಾಧಿಕಾರಿ ವಶಕ್ಕೆ ಪಡೆದುಕೊಂಡಿದ್ದಾರೆ.
ಶಿರ್ವ ಪೊಲೀಸರು ಪದವು ಜಂಕ್ಷನ್ ಬಳಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಬೆಳ್ಳಣ್ ಕಡೆಯಿಂದ ಶಿರ್ವ ಕಡೆಗೆ ಬರುತ್ತಿದ್ದ ಟಿಪ್ಪರನ್ನು ಪೊಲೀಸರು ನಿಲ್ಲಿಸಲು ಸೂಚಿಸಿದಾಗ ಅದರ ಚಾಲಕ ಟಿಪ್ಪರ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದ ಎನ್ನಲಾಗಿದೆ.
ಬಳಿಕ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಟಿಪ್ಪರ್ ಮಾಲಕನ ಸೂಚನೆಯಂತೆ ಟಿಪ್ಟರ್ ನಲ್ಲಿದ್ದ ಮರಳನ್ನು ದ.ಕ. ಜಿಲ್ಲೆಯ ಅಡ್ಡರು ಬಳಿಯ ಗುರುಪುರ ನದಿಯಿಂದ 3 ಯುನಿಟ್ ಮರಳನ್ನು ಕಳವು ಮಾಡಿ ಟಿಪ್ಪರ್‌ಗೆ ತುಂಬಿಸಿ ಮಾರಾಟ ಮಾಡಲು ಸಾಗಿಸುತ್ತಿರುವುದಾಗಿ ತಿಳಿಸಿದನು ಎನ್ನಲಾಗಿದೆ
- Advertisement -








