Saturday, May 4, 2024
spot_imgspot_img
spot_imgspot_img

ಭಾರೀ ಸದ್ದು ಮಾಡುತ್ತಿದೆ ದುಬೈ ರಾಷ್ಟ್ರದಲ್ಲಿ ಚಿತ್ರೀಕರಣಗೊಂಡ “ನೆನಪು” ತುಳು ವಿಡಿಯೋ ಸಾಂಗ್

- Advertisement -G L Acharya panikkar
- Advertisement -

ವಿಭಿನ್ನ ಶೈಲಿಯ ದೃಶ್ಯಾವಳಿಗಳೊಂದಿಗೆ ಚಿತ್ರೀಕರಣಗೊಂಡ ತುಳು ಆಲ್ಬಮ್ ಸಾಂಗ್ ಇದೀಗ ತುಳುನಾಡಿನಲ್ಲಿ ಭಾರೀ ಸದ್ದು ಮಾಡುತ್ತಿದೆ. VK Films ಅರ್ಪಿಸುವ ನೆನಪು ತುಳು ವಿಡಿಯೋ ಸಾಂಗ್ VK Films ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದ್ದು, ತುಳುನಾಡು ಸೇರಿದಂತೆ ದೇಶ ವಿದೇಶಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಫಾರೂಕ್ ಶೇಖ್ ಮತ್ತು ಫ್ಲ್ಯಾನಿ ಡಿ’ಸೋಜ ಅಭಿನಯಿಸಿದ ಈ ಹಾಡಿಗೆ ತುಳುನಾಡಿನ ಖ್ಯಾತ ಹಿನ್ನಲೆ ಗಾಯಕ ರಕ್ಷಣ್ ಮಾಡೂರು ಧ್ವನಿಯಾಗಿದ್ದಾರೆ.

ಸೌಮ್ಯ ಗಿರೀಶ್ ಆಚಾರ್ಯ ನಿರ್ಮಾಪಕತ್ವದಲ್ಲಿ ಮೂಡಿಬಂದ ಈ ಹಾಡಿಗೆ ವೆಂಕಿ ಎರ್ಮಾಲ್ ಸಾಹಿತ್ಯ, ಸಮಗ್ರ ನಿರ್ವಹಣೆ ನೀಡಿದ್ದಾರೆ. ದುಬೈ ರಾಷ್ಟ್ರದಲ್ಲಿ ಚಿತ್ರೀಕರಣಗೊಂಡ ಈ ವಿಡಿಯೋ ಸಾಂಗ್‌ನ ಎಲ್ಲಾ ವಿಭಿನ್ನ ಶೈಲಿಯ ದೃಶ್ಯಾವಳಿಗಳ ಚಿತ್ರೀಕರಣ ಹಾಗೂ ಸಂಕಲನವನ್ನು ಫ್ರಾಂಕ್ಲಿನ್ ರಾಡ್ರಿಗಸ್ ಸಿದ್ಧಕಟ್ಟೆ ಮಾಡಿದ್ದಾರೆ.

ಗುಲಾಬಿ ಹಾಗೂ ಭಾಸ್ಕರ ಆಚಾರ್ಯ, ಲಕ್ಷ್ಮೀಶ್‌ ವೆಂಕಟೇಶ್ ಆಚಾರ್ಯ, ಶರತ್ ಪುತ್ರನ್, ರಾಯನ್ ಕಾಸ್ಟಿಲೋನ್, ಯೋಗೀಶ್ ಆಚಾರ್ಯ, ದೀಕ್ಷಿತ್ ಪೊಳಲಿ, ಅಶ್ವಿನಿ ಪೆರುವಾಯಿ ಇವರುಗಳ ಸಹಕಾರದಲ್ಲಿ ಮೂಡಿ ಬಂದ ತುಳು ರೊಮ್ಯಾಂಟಿಕ್ ವೀಡಿಯೋ ಸಾಂಗ್ ಇದೀಗ VK Films ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡು ಕೆಲವೇ ದಿನದಲ್ಲಿ ಐದು ಸಾವಿರಕ್ಕೂ ಅಧಿಕ ವೀಕ್ಷಣೆಯೊಂದಿಗೆ ಭಾರೀ ಸದ್ದು ಮಾಡುತ್ತಿದೆ.

- Advertisement -

Related news

error: Content is protected !!