Sunday, May 19, 2024
spot_imgspot_img
spot_imgspot_img

ಭೂ ವೀಕ್ಷಣಾ ಉಪಗ್ರಹ ಸೇರಿ 3 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

- Advertisement -G L Acharya panikkar
- Advertisement -

ಭಾರತದ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ-ISRO) ಈ ವರ್ಷದ ಮೊದಲ ಭೂ ವೀಕ್ಷಣಾ ಉಪಗ್ರಹವನ್ನು(ಇಒಎಸ್​ 04) ನಿನ್ನೆ ಮುಂಜಾನೆ ಯಶಸ್ವಿಯಾಗಿ ಉಡಾವಣೆ ಮಾಡಿತು. ಶ್ರೀಹರಿಕೋಟಾದ ಸತೀಶ್​ ಧವನ್​ ಉಡ್ಡಯನ ಕೇಂದ್ರದ ಮೊದಲ ಉಡ್ಡಯನ ನೆಲೆಯಿಂದ ಪೋಲಾರ್​ ಉಪಗ್ರಹ ಉಡಾವಣಾ ವಾಹಕ (PSLV C52)ದ ಮೂಲಕ ಇಒಎಸ್​-04 ಮತ್ತು ಇತರ ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದ್ದು, ಈ ಬಗ್ಗೆ ಇಸ್ರೋ ಟ್ವೀಟ್ ಮಾಡಿದೆ.

ಇಒಎಸ್​-04 ಭೂ ವೀಕ್ಷಣಾ ಉಪಗ್ರಹದೊಟ್ಟಿಗೆ ನಭಕ್ಕೆ ಏರಿದ ಉಪಗ್ರಹಗಳು INSPIRESat ಮತ್ತು INSAT-2DT. ಇದರಲ್ಲಿ INSPIRESat ಎಂಬುದು ವಿದ್ಯಾರ್ಥಿಗಳು ತಯಾರಿಸಿದ ಉಪಗ್ರಹವಾಗಿದ್ದರೆ, INSAT-2DT ಒಂದು ಡಬ್​ ಮಾಡಲಾದ ಬಾಹ್ಯಾಕಾಶ ನೌಕೆ. ಇಒಎಸ್​-04 ಭೂ ವೀಕ್ಷಣಾ ಉಪಗ್ರಹ 1710 ಕೆಜಿ ತೂಕವಿದ್ದು, ಇದನ್ನು ಪಿಎಸ್​ಎಲ್​ವಿ ಸಿ52ವಾಹಕವು 529 ಕಿಮೀ ಕಕ್ಷೆಯ ಸೂರ್ಯ-ಸಿಂಕ್ರೊನಸ್ ಧ್ರುವೀಯ ಕಕ್ಷೆಗೆ ಸೇರಿಸಿದೆ. ಇಒಎಸ್​-04 ಒಂದು ರಾಡಾರ್​ ಇಮೇಜಿಂಗ್ ಉಪಗ್ರಹವಾಗಿದ್ದು, ಯಾವುದೇ ರೀತಿಯ ವಾತಾವರಣವಿದ್ದರೂ, ಕೃಷಿ, ಅರಣ್ಯ, ತೋಟಗಾರಿಕೆ, ಮಣ್ಣಿನ ತೇವಾಂಶ, ಜಲವಿಜ್ಞಾನ, ಪ್ರವಾಹ ನಕ್ಷೆ ಅಪ್ಲಿಕೇಶನ್​​ಗಳಿಗೆ ಅತ್ಯುತ್ತಮ ಗುಣಮಟ್ಟದ ಫೋಟೋಗಳನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.

vtv vitla
vtv vitla

ಭೂವೀಕ್ಷಣಾ ಉಪಗ್ರಹ 04 ಸೇರಿ ಒಟ್ಟು ಮೂರು ಉಪಗ್ರಹಗಳು ನಭಕ್ಕೆ ಏರುತ್ತಿದ್ದಂತೆ ಉಡ್ಡಯನ ಕೇಂದ್ರದಲ್ಲಿದ್ದವರೆಲ್ಲ ಹರ್ಷೋದ್ಘಾರ ಮಾಡಿದ್ದಾರೆ. ಎಲ್ಲ ಮೂರೂ ಉಪಗ್ರಹಗಳನ್ನೂ ಯಶಸ್ವಿಯಾಗಿ ಆಯಾ ಸ್ಥಳಗಳಲ್ಲಿ ನಿಯೋಜಿಸಲಾಗಿದೆ ಎಂದು ಉಡಾವಣಾ ನಿರ್ದೇಶಕರು ಘೋಷಿಸಿದರು. ನಂತರ, ಪಿಎಸ್​ಎಲ್​​ವಿ ಸಿ 52ರ ಮಿಷನ್​​ ಯಶಸ್ವಿಯಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್​.ಸೋಮನಾಥ್​ ತಿಳಿಸಿದ್ದಾರೆ.

- Advertisement -

Related news

error: Content is protected !!