ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣತಯಾರಿ ನಡೆಯುತ್ತಿದ್ದಂತೆಯೇ ಆ ದಿನದ ನೆನಪಿಗಾಗಿ ಸಂಭ್ರಮಾಚರಣೆಗೂ ದೇಶ-ವಿದೇಶಗಳಲ್ಲಿ ಸಿದ್ಧತೆ ನಡೆದಿದೆ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಸಂಭ್ರಮಕ್ಕಾಗಿ ಅಮೆರಿಕದ ಉದ್ದಗಲಕ್ಕೂ ಇರುವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗುತ್ತಿದೆ.
August 5, 2020 Spanish Hindus celebrate the groundbreaking ceremony of the Shri Ram Temple in Ayodhya#AyodhyaRamMandir pic.twitter.com/zZquwPHgFa
— S♥I♥V♥A♥P♥R♥A♥S♥A♥T♥H♥ S ? (@its_Sivaprasath) August 4, 2020
ರಾಮ ದೇವಾಲಯದ ಡಿಜಿಟಲ್ ಚಿತ್ರಗಳನ್ನು ಇರಿಸಿದ ಶ್ರೀರಾಮ ಟ್ಯಾಬ್ಲೋ ಜತೆ ಯುಸ್ ಕ್ಯಾಪಿಟಲ್ ಹಿಲ್ನಲ್ಲಿ ಮಂಗಳವಾರ ರಾತ್ರಿ ಭವ್ಯ ಮೆರವಣಿಗೆ ನಡೆಸಲಿದ್ದಾರೆ. ನ್ಯೂಯಾರ್ಕ್ ನಗರದಲ್ಲಿರುವ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್ ನ ಪರದೆಯ ಮೇಲೆ ಆ.05 ರಂದು ಭಗವಾನ್ ಶ್ರೀರಾಮನ 3ಡಿ ಚಿತ್ರಗಳನ್ನು ಮೂಡಿಸುವ ಮೂಲಕ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಭೂಮಿಪೂಜೆಯ ಕಾರ್ಯಕ್ರಮವನ್ನು ಸಂಭ್ರಮಿಸಲಾಗುತ್ತದೆ.