Sunday, May 19, 2024
spot_imgspot_img
spot_imgspot_img

ಮಂಕಿಪಾಕ್ಸ್‌ ಪ್ರಕರಣ ಹಿನ್ನೆಲೆ: ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ

- Advertisement -G L Acharya panikkar
- Advertisement -

ದೇಶದಲ್ಲಿ ಮಂಕಿಪಾಕ್ಸ್‌ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗಾಗಿ ಕೆಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬುಧವಾರ ಬಿಡುಗಡೆ ಮಾಡಿದೆ. ಸಾರ್ವಜನಿಕರಿಗೆ ಏನು ಮಾಡಬೇಕು, ಏನು ಮಾಡಬಾರದು ಎಂಬಿತ್ಯಾದಿ ಸಲಹೆಗಳನ್ನು ನೀಡಲಾಗಿದ್ದು ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ.

ಏನು ಮಾಡಬೇಕು?

  • ಐಸೋಲೇಷನ್‌ನಲ್ಲಿರುವ ಸೋಂಕಿತ ವ್ಯಕ್ತಿಯನ್ನು ಇತರರ ಸಂಪರ್ಕದಿಂದ ದೂರವಿಡಬೇಕು.
  • ಆಗಾಗ್ಗೆ ಹ್ಯಾಂಡ್‌ ಸ್ಯಾನಿಟೈಸರ್‌ ಅಥವಾ ಸಾಬೂನಿನಿಂದ ಕೈಗಳನ್ನು ಶುದ್ಧಗೊಳಿಸಬೇಕು.
  • ಮೂಗು, ಬಾಯಿಯನ್ನು ಮಾಸ್ಕ್ ನಿಂದಲೂ, ಕೈಗಳನ್ನು ಹ್ಯಾಂಡ್‌ ಗ್ಲೌಸ್‌ಗಳಿಂದಲೂ ಕವರ್‌ ಮಾಡಿಕೊಳ್ಳಬೇಕು

ಏನು ಮಾಡಬಾರದು?

  • ಸೋಂಕಿತರ ಜತೆಗೆ ಮಲಗುವುದು, ಊಟ ಮಾಡುವುದು, ಅವರ ಬಟ್ಟೆ, ಟವಲ್‌ ಬಳಸುವುದು ಇತ್ಯಾದಿ ಮಾಡಬಾರದು.
  • ಸೋಂಕಿತರ ಬಟ್ಟೆಗಳನ್ನು, ಆರೋಗ್ಯವಂತ ವ್ಯಕ್ತಿಗಳ ಬಟ್ಟೆಗಳನ್ನು ಒಟ್ಟಿಗೆ ತೊಳೆಯಬಾರದು.
  • ಸೋಂಕಿನ ಲಕ್ಷಣಗಳು ಕಂಡು ಬಂದ ಕೂಡಲೇ ಸಾಮಾಜಿಕ ಸಭೆ, ಸಮಾರಂಭಗಳಲ್ಲಿ ಕಾಣಿಸಬಾರದು.
- Advertisement -

Related news

error: Content is protected !!