

ಮಂಗಳಮುಖಿಯರ ಸಹವಾಸ ಮಾಡಿದ ಮಹಿಳೆ ಮೂವರು ಮಕ್ಕಳು ಹಾಗೂ ಗಂಡನನ್ನು ತೊರೆಯಲು ಮುಂದಾದ ಘಟನೆ ಜಯಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮೂಲತಃ ದಂಪತಿಗಳು ವಿಜಯಪುರ ಜಿಲ್ಲೆಯ ರಾಣೇಬೆನ್ನೂರಲ್ಲಿ ವಾಸ ಮಾಡುತ್ತಿದ್ದರು. ಈ ವೇಳೆ ಮಹಿಳೆಗೆ ಮಂಗಳಮುಖಿಯರ ಪರಿಚಯ ಆಗಿದೆ. ಹೀಗಾಗಿ 2 ತಿಂಗಳ ಹಿಂದೆ 3 ಮಕ್ಕಳ ತಾಯಿ ಮಂಗಳಮುಖಿಯರೊಂದಿಗೆ ಹೋಗಿದ್ದಾಳೆ. ಈ ವಿಚಾರವಾಗಿ ಗಂಡ ಮಂಗಳ ಮುಖಿಯರ ಸಹವಾಸದಿಂದ ಮನ ಪರಿವರ್ತನೆಗೊಂಡು ತೆರಳಿದ್ದ ನನ್ನ ಪತ್ನಿಯನ್ನು ಹುಡುಕಿಕೊಡಿ ಎಂದುರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ಮೆಟ್ಟಿಲೇರಿ ಮಂಗಳಮುಖಿಯರ ಮೇಲೆ ದೂರು ನೀಡಿದ್ದಾನೆ.
ಮಹಿಳೆ ಮಂಗಳಮುಖಿಯರ ಸಹವಾಸದಿಂದ ಲಿಂಗ ಪರಿವರ್ತನೆ ಮಾಡಿಕೊಳ್ಳಲು ಮುಂದಾಗಿದ ಪತ್ನಿಗೆ ಗಂಡ ಯಮನಪ್ಪ ಅನುಮತಿ ನೀಡಿಲ್ಲ. ಈ ಕಾರಣದಿಂದ ಸಿಡಿದೆದ್ದ ಪತ್ನಿ ಪತಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಸದ್ಯ ಈ ಘಟನೆ ಪೋಲಿಸರಿಗೆ ತಲೆನೋವಾಗಿ ಪರಿಣಮಿಸಿದ್ದು, ಇದು ಗಂಡ-ಹೆಂಡತಿಯ ವಿಚಿತ್ರವಾದ ಸಾಂಸಾರಿಕ ವಿಷಯವಾಗಿದ್ದು, ಸಾಂತ್ವನ ಕೇಂದ್ರದಲ್ಲಿ ಈ ಸಮಸ್ಯೆ ಬಗೆಹರಿಸುವಂತೆ ಪೋಲಿಸರು ಸಲಹೆ ನೀಡಿದ್ದಾರೆ.
ಹೀಗಾಗಿ ನಗರದ ಸಾಂತ್ವಾನ ಕೇಂದ್ರದಲ್ಲಿ ಸಂಧಾನ ನಡೆದಿದ್ದು, ಮೂರು ಮಕ್ಕಳ ತಾಯಿ ಮಾತ್ರ ಪತಿ ಯಮನಪ್ಪ ಜೊತೆ ಹೋಗಲು ಹಿಂದೇಟು ಹಾಕಿದ್ದಾಳೆ.








