Friday, June 5, 2026
spot_imgspot_img
spot_imgspot_img

ಮಂಗಳೂರಿನಿಂದ ಕದ್ದ ಬೈಕ್‌ಗೆ ನಕಲಿ ನಂಬರ್‌ ಪ್ಲೇಟ್‌ ಬಳಸಿ ತಿರುಗಾಡುತ್ತಿದ್ದ ಯುವಕನ ಬಂಧನ

- Advertisement -
- Advertisement -
vtv vitla

ಕೋಝಿಕೋಡ್: ಮಂಗಳೂರಿನಿಂದ ಕದ್ದ ಬೈಕ್ ನೊಂದಿಗೆ ಕಾಸರಗೋಡು ಮೂಲದ ಯುವಕನನ್ನು ಕೋಝಿಕೋಡ್ ನಲ್ಲಿ ಬಂಧಿಸಲಾಗಿದೆ.

ಬಂಧಿತನನ್ನು ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಬ್ದುಲ್ ಶುಯಿಬ್‌ (20) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ನಡಕ್ಕಾವು ಪ್ಯಾಲೇಸ್ ರಸ್ತೆಯಿಂದ ಬಂದ ಶುಯಿಬ್‌, ಇಲ್ಲಿ ವಾಹನವನ್ನು ಪರಿಶೀಲಿಸುತ್ತಿದ್ದ ಪೊಲೀಸರನ್ನು ನೋಡಿ ಬೈಕ್ ಅನ್ನು ಬಿಟ್ಟು ಪರಾರಿಯಾಗಿದ್ದಾನೆ.

ಬೈಕ್ ಅನ್ನು ಪರಿಶೀಲಿಸಿದಾಗ ನಂಬರ್ ಪ್ಲೇಟ್ ನಕಲಿ ಎಂದು ತಿಳಿದುಬಂದಿದೆ, ನಂತರ ಇಂಜಿನ್ ಸಂಖ್ಯೆ ಮತ್ತು ಚೇಸ್ ಸಂಖ್ಯೆಯನ್ನು ಬಳಸಿಕೊಂಡು ಮೂಲ ಮಾಲೀಕರನ್ನು ಪತ್ತೆಹಚ್ಚಲಾಯಿತು ಮತ್ತು ಬೈಕನ್ನು ಮಂಗಳೂರಿನಿಂದ ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ನಡೆಸಿದ ತನಿಖೆಯಲ್ಲಿ ಶುಯಿಬ್ ನನ್ನು ಬಂಧಿಸಲಾಗಿದೆ.

- Advertisement -

Related news

error: Content is protected !!