Monday, April 29, 2024
spot_imgspot_img
spot_imgspot_img

ಮಂಗಳೂರು:ವಿದ್ಯಾರ್ಥಿಗಳ ಇತ್ತಂಡಗಳ ನಡುವೆ ಹೊಡೆದಾಟ; ಸ್ಥಳಕ್ಕೆ ಧಾವಿಸಿದ ಪೊಲೀಸರ ಮೇಲೂ ಹಲ್ಲೆ: 9 ಮಂದಿ ವಿದ್ಯಾರ್ಥಿಗಳು ಅರೆಸ್ಟ್!!

- Advertisement -G L Acharya panikkar
- Advertisement -
vtv vitla

ಮಂಗಳೂರು:ಇಲ್ಲಿನ ಗುಜ್ಜರಕೆರೆ ಪ್ರದೇಶದಲ್ಲಿ ಪದವಿ ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸವಿದ್ದ ವಿದ್ಯಾರ್ಥಿಗಳ ಎರಡು ತಂಡಗಳ ನಡುವೆ ಹೊಡೆದಾಟ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದ್ದು, ಘಟನೆಗೆ ಸಂಬಂಧಿಸಿ 9 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

vtv vitla

ಬಂಧಿತ ಆರೋಪಿಗಳು ಆದಿತ್ಯ, ಕೆನ್ ಜಾನ್ಸನ್, ಮುಹಮ್ಮದ್, ಅಬ್ದುಲ್ ಶಾಹಿದ್, ವಿಮಲ್, ಫಹದ್, ಅಬುತಹರ್, ಮುಹಮ್ಮದ್ ನಾಸಿಫ್, ಆದರ್ಶ ಎಂದು ಗುರುತಿಸಲಾಗಿದೆ. ಒಟ್ಟು 16 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಈ ಘಟನೆಗೆ ಸಂಬಂಧಿಸಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಹಾಗೂ ಐದು ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

ವಿವರಗಳ ಪ್ರಕಾರ, ದೂರುದಾರ ಆದರ್ಶ ಪ್ರೇಮಕುಮಾರ್ (21)ಮೂಲತಃ ಕೇರಳದ ಕೊಲ್ಲಂ ನಿವಾಸಿಯಾಗಿದ್ದು, ಈತ ನಗರದ ಕಾಲೇಜು ಒಂದರಲ್ಲಿ 3 ನೇ ವರ್ಷದ ಬಿಎಸ್ಸಿ ಹಾಸ್ಪಿಟಾಲಿಟಿ ಸೈನ್ಸ್ ಮ ವಿದ್ಯಾರ್ಥಿಯಾಗಿದ್ದಾನೆ. ಈತ ನಗರದ ಲೈಟ್ ಹೌಸ್ ಹಿಲ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ

ಆದರ್ಶ್ ಡಿಸೆಂಬರ್ 2 ರಂದು ಸಂಜೆ 7 ಗಂಟೆಗೆ ತನ್ನ ಸ್ನೇಹಿತ ಅಭಿರಾಮಿ ಜೊತೆ ಮಾತನಾಡುತ್ತಿದ್ದಾಗ, ಸಿನಾನ್ ಮತ್ತು ಅದೇ ಕಾಲೇಜಿನ ಇತರ ಎಂಟು ವಿದ್ಯಾರ್ಥಿಗಳು ಇಂಟರ್ಲಾಕ್ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಆದರ್ಶ್ ಹಾಗೂ ಮೊಹಮ್ಮದ್ ನಾಸಿಫ್ ಗಾಯಗೊಂಡಿದ್ದಾರೆ. ಗಲಾಟೆ ಬಿಡಿಸಲು ಬಂದಿದ್ದ ತನ್ನ ಸ್ನೇಹಿತರಾದ ಶನಿನ್ ಮತ್ತು ಶ್ರವಣ್ ಅವರಿಗೆ ಜೀವ ಬೆದರಿಕೆ ಇದೆ ಎಂದು ದೂರುದಾರರು ತಿಳಿಸಿದ್ದಾರೆ.

vtv vitla
vtv vitla

ಗಲಾಟೆ ಬಿಡಿಸಲು ಬಂದಿದ್ದ ತನ್ನ ಸ್ನೇಹಿತರಾದ ಶನಿನ್ ಮತ್ತು ಶ್ರವಣ್ ಅವರು ಗುಜ್ಜರಕರೆ ಬಳಿ ಹಾಸ್ಟೆಲ್ ನಲ್ಲಿ ವಾಸ್ತವ ಇದ್ದು ಅವರು ಅಪಾಯದಲ್ಲಿದ್ದು ರಕ್ಷಣೆ ಮಾಡಲು ಕೋರಿಕೊಂಡಿದ್ದರು.

ಅದರಂತೆ ರಾತ್ರಿ 10 ಗಂಟೆ ಸುಮಾರಿಗೆ ಪಿಎಸ್‌ಐ ಶೀತಲ್ ಹಾಗೂ ಸಿಬ್ಬಂದಿ ಹಾಸ್ಟೆಲ್ ಬಳಿ ಹೋದಾಗ ಹಾಸ್ಟೆಲ್ ನಸಿ ವಿದ್ಯಾರ್ಥಿಗಳು ಇಂಟರ್ ಲಾಕ್, ಕಲ್ಲು ಹಾಗೂ ಕುರ್ಚಿಗಳನ್ನು ಎಸೆದು ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

vtv vitla
vtv vitla

ಅಬ್ದುಲ್ ಸಿನಾನ್ ಅವರು ಆದರ್ಶ್ ಮತ್ತು ಅವರ ಸ್ನೇಹಿತರ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಫಹಾದ್, ಅಬು ತಾಹರ್, ಮೊಹಮ್ಮದ್ ನಾಸಿಫ್ ಮತ್ತು ಆದರ್ಶ್ ಅವರನ್ನು ಬಂಧಿಸಿದ್ದಾರೆ.

ವೈಯಕ್ತಿಕ ವಿಚಾರದ ದ್ವೇಷವೇ ಈ ಹೊಡೆದಾಟಕ್ಕೆ ಕಾರಣ ಎನ್ನಲಾಗಿದೆ. ಈ ಘಟನೆ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪ್ರಸಕ್ತ ಪರಿಸ್ಥಿತಿ ಶಾಂತವಾಗಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸ್ ಆಯುಕ್ತ ಎನ್ . ಶಶಿಕುಮಾರ್ ತಿಳಿಸಿದ್ದಾರೆ.

vtv vitla
vtv vitla
vtv vitla
- Advertisement -

Related news

error: Content is protected !!