Wednesday, May 15, 2024
spot_imgspot_img
spot_imgspot_img

ಮಂಗಳೂರು: ಇಂಟರ್ನ್ ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ; ಜಾಗೃತ ಮಹಿಳಾ ವೇದಿಕೆಯ ಸದಸ್ಯೆ ವಿರುದ್ದFIR!!

- Advertisement -G L Acharya panikkar
- Advertisement -

ಮಂಗಳೂರು: ಇಂಟರ್ನ್ ಶಿಪ್ ವಿದ್ಯಾರ್ಥಿನಿಗೆ ವಕೀಲರೊಬ್ಬರು ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಮಂಗಳೂರಿನ ಅಶೋಕ ನಗರದ ಜಾಗೃತ ಮಹಿಳಾ ವೇದಿಕೆ ಪವಿತ್ರಾ ಆಚಾರ್ಯ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪದಡಿ ಪವಿತ್ರಾ ಎಂಬವರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ.

ನಗರದ ಉರ್ವ ಪೊಲೀಸ್ ಠಾಣೆಯಲ್ಲಿ ಬಲವಂತವಾಗಿ ಮುಚ್ಚಳಿಕೆ‌ ಬರೆಸಿರುವ ಆರೋಪ ಕೇಳಿಬಂದಿದೆ. ಮುಚ್ಚಳಿಕೆ ಬರೆಸಲು ಪವಿತ್ರ ಆಚಾರ್ಯ ಸಾಥ್ ನೀಡಿದ್ದಾರೆ ಎಂದು ಹೇಳಲಾಗಿದೆ. ಪವಿತ್ರ ಆಚಾರ್ಯಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸಂತ್ರಸ್ತೆಯ ಸ್ನೇಹಿತೆ ಬಳಿಯಿಂದ ಬರೆಸಿಕೊಂಡಿರುವ ಮುಚ್ಚಳಿಕೆ ಇದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಚ್ಚಳಿಕೆಯ ಮೊದಲ ಸಾಲಿನಲ್ಲಿ ರಾಜೇಶ್ ಭಟ್ ಬಳಿ ಕ್ಷಮೆ ಕೇಳಲಾಗಿದೆ. ನೀವು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ನಾನು ನಿಮ್ಮನ್ನು ಟಾರ್ಗೆಟ್ ಮಾಡಿದ್ದೆ. ಆಡಿಯೋವನ್ನು ಎಡಿಟ್ ಮಾಡಿ ವಾಟ್ಸಪ್ ಮತ್ತು ಸಿಡಿ ಮಾಡಿಸಿ ಹರಿಬಿಟ್ಟಿದ್ದೆ. ಹಲವಾರು ಜನರಿಗೆ ಇದನ್ನು ನಾನೇ ಕಳುಹಿಸಿದ್ದೆ.

ನಿಮ್ಮ ಕುಟುಂಬ ಮತ್ತು ಸಮಾಜದಲ್ಲಿ ಹೆಸರು ಹಾಳು ಮಾಡಲು ಬಯಸಿದ್ದೆ. ಬಾರ್ ಅಸೋಸಿಯೇಶನ್​ಗೂ ನಾನೇ ಸಿಡಿ ಕಳಿಸಿಕೊಟ್ಟಿದ್ದೆ. ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಅಂತ ಯಾವುದೇ ಬೇಷರತ್ ಕ್ಷಮೆ ಕೋರುತ್ತಿದ್ದೇನೆ. ಇನ್ನು ಮುಂದೆ ನಿಮಗೆ ನನ್ನ ಮುಖ ತೋರಿಸುವುದಿಲ್ಲ ಎಂದು ಬರೆದಿರುವ ಮುಚ್ಚಳಿಕೆ ಇದಾಗಿದೆ.

ವಕೀಲ ರಾಜೇಶ್ ಭಟ್ ಇಂಟರ್ನ್ ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ, ರಾಜೇಶ್ ಸೇರಿದಂತೆ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಪ್ರಕರಣದಲ್ಲಿ ರಾಜೇಶ್ ಭಟ್ ಸೇರಿ ಪವಿತ್ರ ಆಚಾರ್ಯ, ಶಿವಾನಂದ ಮತ್ತು ಧ್ರುವ ( ಸಂತ್ರಸ್ತೆಯ ಬಾಯ್ ಫ್ರೆಂಡ್ ) ಪ್ರಮುಖ ಆರೋಪಿಗಳಾಗಿದ್ದಾರೆ. ರಾಜೇಶ್ ಭಟ್ ಮೇಲೆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊರಿಸಲಾಗಿದ್ದು, ಉಳಿದ ಮೂವರು ಆರೋಪಿಗಳ ಮೇಲೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಆರೋಪವಿದೆ.

ಇದನ್ನೂಓದಿ: ಮಂಗಳೂರು: ಇಂಟರ್ನ್‌ಶಿಪ್‌ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ; ಖ್ಯಾತ ವಕೀಲನ ಮೇಲೆ FIR

ಸದ್ಯ ನಾಲ್ವರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತನಿಖೆಗಾಗಿ ಎಸಿಪಿ ರಂಜಿತ್ ಬಂಡಾರು ನೇತೃತ್ವದಲ್ಲಿ ಆರೋಪಿಗಾಗಿ ಹುಡುಕಾಟ ನಡೆಸಿದೆ.

- Advertisement -

Related news

error: Content is protected !!