Wednesday, June 17, 2026
spot_imgspot_img
spot_imgspot_img

ಮಂಗಳೂರು: ಎಂಡಿಎಂಎ ಮಾದಕ ವಸ್ತುಗಳು ಹೊಂದಿದ್ದ ಮೂವರ ಸೆರೆ

- Advertisement -
- Advertisement -

ಮಂಗಳೂರು: ಮಾದಕ ವಸ್ತುಗಳನ್ನು ಅಕ್ರಮವಾಗಿ ಕಾರಿನಲ್ಲಿ ಕೇರಳದ ಗಡಿ ಭಾಗದ ಮೂಲಕ ಮಂಗಳೂರು ನಗರದಲ್ಲಿ ಸಾಗಾಟ ಮಾಡುತ್ತಿದ್ದವರನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ಮೂವರು ಆರೋಪಿಗಳನ್ನು ನಡೆಸಿ ಬಂಧಿಸಿದ್ದಾರೆ.

ಉಳ್ಳಾಲ ಮೇಲಂಗಡಿಯ ಅಬ್ದುಲ್ ರಹ್ಮಾನ್ ಅರ್ಫಾನ್ ಯಾನೆ ಜಲ್ದಿ ಅರ್ಫಾನ್ (24), ಬೋಳೂರು ಬೊಕ್ಕಪಟ್ಣದ ಅಬ್ದುಲ್ ಜಲೀಲ್ (42), ಬೋಳಿಯಾರ್ ಕಾಪಿಕಾಡ್‌ನ ಮುಹಮ್ಮದ್ ಮನ್ಸೂರ್ (29) ಬಂಧಿತ ಆರೋಪಿಗಳು. ಇವರಿಂದ 32 ಗ್ರಾಂ ತೂಕದ 1,62,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತುಗಳು, 4 ಮೊಬೈಲ್ ಫೋನ್‌ಗಳು, ಡಿಜಿಟಲ್ ತೂಕ ಮಾಪನ, 22,000 ರೂ. ನಗದು ಹಾಗೂ ಮಾದಕ ವಸ್ತು ಸಾಗಾಟಕ್ಕೆ ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಮೌಲ್ಯ 7,17,000 ರೂ. ಆಗಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

- Advertisement -

Related news

error: Content is protected !!