- Advertisement -
- Advertisement -
ಢಾಕಾ: ಬಾಂಗ್ಲಾದೇಶದಲ್ಲಿನ ಪ್ರಮುಖ ಹಿಂದೂ ನಾಯಕ, ಇಸ್ಕಾನ್ನ ಸಾಧು ಕೃಷ್ಣದಾಸ್ ಪ್ರಭು ಅವರನ್ನು ಬಾಂಗ್ಲಾದ ಮಧ್ಯಾಂತರ ಸರಕಾರ ಬಂಧಿಸಿದೆ.
ದೇಶದ್ರೋ ಹದ ಆರೋಪ ಹೊರಿಸಿ ಢಾಕಾ ವಿಮಾನ ನಿಲ್ದಾಣದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕೃಷ್ಣದಾಸ್ ಅವರು ಬೃಹತ್ ಪ್ರತಿಭಟನೆಯನ್ನು ಇತ್ತೀಚೆಗೆ ನಡೆಸಿದ್ದರು. ಈ ವೇಳೆ ಬಾಂಗ್ಲಾದ ಮಧ್ಯಾಂತರ ಸರಕಾರದ ವಿರುದ್ಧ ಮಾತನಾಡಿದ್ದಲ್ಲದೇ ಕೇಸರಿ ಧ್ವಜವನ್ನು ಹಾರಿಸಿದ್ದರು. ಹೀಗಾಗಿ ಕೃಷ್ಣದಾಸ್ ಹಾಗೂ ಇತರ 18 ಮಂದಿ ವಿರುದ್ಧ ಬಾಂಗ್ಲಾ ಸರಕಾರ ದೇಶದ್ರೋಹದ ಪ್ರಕರಣ ದಾಖಲಿಸಿತ್ತು.
ಶೇಖ್ ಹಸೀನಾ ಪದಚ್ಯುತಿಯ ಬಳಿಕ ಬಾಂಗ್ಲಾದಲ್ಲಿ ಹಿಂಸಾಚಾರ ಹೆಚ್ಚಳವಾಗಿದ್ದು, ಹಿಂದೂಗಳನ್ನು ಗುರಿಯಾಗಿಸಿ ಹಲವು ದಾಳಿ ನಡೆದಿವೆ. ಇದರ ಬೆನ್ನಲ್ಲೇ ಸರಕಾರ ಕೃಷ್ಣದಾಸ್ರನ್ನು ಬಂಧಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.
- Advertisement -