Monday, June 30, 2025
spot_imgspot_img
spot_imgspot_img

ಮಂಗಳೂರು: ಒಂಭತ್ತನೇ ಮಹಡಿಯಿಂದ ಬಿದ್ದು ಎಸಿ ಮೆಕ್ಯಾನಿಕ್‌ ಸಾವು..!!

- Advertisement -
- Advertisement -
vtv vitla

ಮಂಗಳೂರು: ಒಂಬತ್ತನೇ ಮಹಡಿಯ ಹೊರಗೆ ಎಸಿಯನ್ನು ಫಿಟ್ ಮಾಡುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ಎಸಿ ಮೆಕ್ಯಾನಿಕ್ ಸಾವನ್ನಪ್ಪಿದ ಘಟನೆ ನಗರದ ನಂತೂರಿನಲ್ಲಿ ನಡೆದಿದೆ.

ಮೃತರನ್ನು ಬಂಟ್ವಾಳ ತಾಲೂಕಿನ ಮಣಿಹಳ್ಳ ನಿವಾಸಿ ವಿನಯ್ ತಾವ್ರೋ(23) ಎಂದು ಗುರುತಿಸಲಾಗಿದೆ.

ಇವರು ನಂತೂರಿನ ಹಮಾರಾ ರೆಫ್ರಿಜರೇಟರ್ ಕಂಪನಿಯಲ್ಲಿ ಕೆಲಸಕ್ಕಿದ್ದು, ನಂತೂರಿನ ಮೌಂಟ್ ಟಿಯಾರಾ ಅಪಾರ್ಟ್ಮೆಂಟ್ ನಲ್ಲಿ ಎಸಿ ಮೆಷಿನ್ ಫಿಟ್ ಮಾಡಲು ತೆರಳಿದ್ದರು. ಒಂಬತ್ತನೇ ಮಹಡಿಯ ಮನೆಯ ಆವರಣ ಗೋಡೆಯ ಹೊರಭಾಗದಲ್ಲಿ ವಿನಯ್ ಮತ್ತು ಇನ್ನೊಬ್ಬ ಯುವಕ ಮೆಷಿನ್ ಫಿಟ್ ಮಾಡುತ್ತಿದ್ದರು. ಈ ವೇಳೆ, ವಿನಯ್ ಆಯತಪ್ಪಿ ಮಹಡಿಯಿಂದ ಹೊರಕ್ಕೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಯುವಕನ ತಲೆ ಒಡೆದು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.

- Advertisement -

Related news

error: Content is protected !!