Thursday, June 18, 2026
spot_imgspot_img
spot_imgspot_img

ಮಂಗಳೂರು: ಓವರ್‌ಟೇಕ್‌ ಮಾಡುವ ಭರದಲ್ಲಿ 13ವರ್ಷದ ಬಾಲಕನ ಪ್ರಾಣ ತೆಗೆದ ಖಾಸಗಿ ಬಸ್‌..

- Advertisement -
- Advertisement -

ಮಂಗಳೂರು: ಖಾಸಗಿ ಬಸ್‌ನ ಅತೀ ವೇಗಕ್ಕೆ ದ್ವಿಚಕ್ರ ವಾಹನದ ಸವಾರ 13 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ಮಂಗಳೂರಿನ ಲಾಲ್‌ಬಾಗ್ ಬಳಿ ನಡೆದಿದೆ.

ಮೃತ ಬಾಲಕ ಪಡೀಲ್ ಕಣ್ಣೂರಿನ 13 ವರ್ಷದ ಪ್ರಾಯದ ರಕ್ಷಣ್ ಎಂದು ಗುರುತಿಸಲಾಗಿದೆ

ಮಂಗಳೂರು -ಕಿನ್ನಿ ಗೋಳಿ -ಕಟೀಲು ನಡುವೆ ಸಂಚರಿಸುವ ಖಾಸಗಿ ಬಸ್ಸು ಇನ್ನೊಂದು ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬಂದು ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದಿದೆ. ಬೈಕ್‌ ಸವಾರ ನಾರಾಯಣ ಅವರು ಸಂಬಂಧಿ ರಕ್ಷಣ್ ಅವರನ್ನು ಹಿಂಬದಿ ಕುಳ್ಳಿರಿಸಿ ಕೊಟ್ಟಾರ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.

ಯಾವುದೋ ಕಾರ್ಯ ನಿಮಿತ್ತ ಅವರು ಕೊಟ್ಟಾರಕ್ಕೆ ತೆರಳಿ ವಾಪಸ್ ಬರುವ ವೇಳೆ ಅಪಘಾತ ಸಂಭವಿಸಿದೆ. ಮಂಗಳೂರು-ಕಿನ್ನಿಗೋಳಿ-ಕಟೀಲು ನಡುವೆ ಸಂಚರಿಸುವ ಖಾಸಗಿ ಬಸ್ಸು ಇನ್ನೊಂದು ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬಂದು ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದಿದೆ. ಸವಾರ ನಾರಾಯಣ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ, ಸಂಬಂಧಿ ಬಾಲಕ ರಕ್ಷಣ್ ಸ್ಥಳದಲ್ಲೇ ಸಾವನ್ನಪ್ಪಿ ದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಶವದ ತೆರವು ಕಾರ್ಯಾಚರಣೆ ನಡೆಸಿ, ವಾಹನ ಸಂಚಾರ ಸುಗಮಗೊಳಿಸಿದ್ದಾರೆ. ಸಂಚಾರಿ ಪಶ್ವಿಮ ಠಾಣೆಯಲ್ಲಿ ಪ್ರ ಕರಣ ದಾಖಲಾಗಿದೆ.

- Advertisement -

Related news

error: Content is protected !!