Monday, September 14, 2026
spot_imgspot_img
spot_imgspot_img

ಮಂಗಳೂರು: ಔಷಧ ಮಾರಾಟ ನೆಪದಲ್ಲಿ ಮನೆಗೆ ಬಂದು ಮಹಿಳೆಯ ಮಾನಭಂಗಕ್ಕೆ ಯತ್ನ; ಕಾಮುಕ ವ್ಯಕ್ತಿ ಸೆರೆ

- Advertisement -
- Advertisement -

ಮಂಗಳೂರು: ಕಸ್ತೂರಿ ಮಾತ್ರೆ ಮಾರಾಟ ಮಾಡುತ್ತ ಬಂದ ವ್ಯಕ್ತಿಯೊಬ್ಬ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ನಗರದ ಕೊಳಂಬೆ ಗ್ರಾಮದ ಕಜೆಕೋಡಿ ಹೌಸ್ ಬಳಿ ಫೆ.03ರ ಗುರುವಾರ ನಡೆದಿದೆ.

ಆರೋಪಿಯನ್ನು ಮುಲ್ಕಿ ಕೆಂಚನಕೆರೆ ನಿವಾಸಿ ಮೊಹಮ್ಮದ್ ಇಕ್ಬಾಲ್ (52) ಎಂದು ಗುರುತಿಸಲಾಗಿದೆ.

vtv vitla
vtv vitla

ಕಜೆಕೋಡಿ ಹೌಸ್ ಎಂಬಲ್ಲಿ ಬೆಳಿಗ್ಗೆ 11ಗಂಟೆಗೆ ಕಸ್ತೂರಿ ಮಾತ್ರೆ ಗಳನ್ನು ಮಾರಾಟ ಮಾಡಲು ಬಂದ ಮೊಹಮ್ಮದ್ ಇಕ್ಬಾಲ್ ಮಹಿಳೆಯ ಕೈ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದಾನೆ.

ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.

vtv vitla
vtv vitla
- Advertisement -

Related news

error: Content is protected !!