Sunday, June 21, 2026
spot_imgspot_img
spot_imgspot_img

ಮಂಗಳೂರು ರೈಲಿನಲ್ಲಿ ಕಳೆದುಹೋಗಿದ್ದ 8.57 ಲಕ್ಷ ಮೌಲ್ಯದ ಚಿನ್ನವಿದ್ದ ಬ್ಯಾಗ್ ಪತ್ತೆ;

- Advertisement -
- Advertisement -

ಮಂಗಳೂರು: ಮುಂಬೈಯಿಂದ ಬರುತ್ತಿದ್ದ ರೈಲಿನಲ್ಲಿ ಕಳೆದುಹೋಗಿದ್ದ ಚಿನ್ನಾಭರಣ ಟ್ರಾಲಿ ಬ್ಯಾಗ್‌ನಲ್ಲಿ ಮಂಗಳೂರಿನ ಕುಲಶೇಖರ ನಗರದಲ್ಲಿ ಪತ್ತೆಯಾಗಿದೆ.

ಫೆ.27ರಂದು ರವೀಂದ್ರ ಎಂ.ಶೆಟ್ಟಿ ಮತ್ತು ಅವರ ಪತ್ನಿ ಶಶಿಕಲಾ ಶೆಟ್ಟಿ ಸುರತ್ಕಲ್‌-ಮಂಗಳೂರು ನಡುವೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಟ್ರಾಲಿ ಬ್ಯಾಗ್‌ ಕಳೆದು ಹೋಗಿತ್ತು. ಈ ಬಗ್ಗೆ ಮಂಗಳೂರು ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆಗೆ ಮಂಗಳೂರು ರೈಲ್ವೆ ಪೊಲೀಸ್‌ ನಿರೀಕ್ಷಕ ಮೋಹನ್‌ ಕೊಟ್ಟಾರಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ವಿಶೇಷ ತಂಡವು ರೈಲ್ವೆ ಸಿಬಂದಿಯೊಂದಿಗೆ ಟ್ರ್ಯಾಕ್‌ ಪ್ಯಾಟ್ರೋಲಿಂಗ್‌ ನಡೆಸುವಾಗ ಕುಲಶೇಖರ ಸುರಂಗದ ಸಮೀಪ ಟ್ರಾಲಿ ಬ್ಯಾಗ್‌ ಪತ್ತೆಯಾಗಿದೆ.

ಬ್ಯಾಗ್‌ನಲ್ಲಿ 245 ಗ್ರಾಂ ತೂಕದ ವಜ್ರದ ಮತ್ತು ಚಿನ್ನದ ಆಭರಣಗಳು ಸೇರಿದಂತೆ ಅಂದಾಜು ಸುಮಾರು 8,57,500 ರೂ. ಮೌಲ್ಯದ ಸೊತ್ತುಗಳಿದ್ದವು. ರೈಲ್ವೆ ಪೊಲೀಸ್‌ ಅಧ್ಯಕ್ಷಕಿ ಡಾ| ಸೌಮ್ಯಲತಾ ಎಸ್‌.ಕೆ, ಉಪಾಧ್ಯಕ್ಷಕಿ ಗೀತಾ ಸಿ.ಆರ್‌. ಅವರ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮಂಗಳೂರು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

- Advertisement -

Related news

error: Content is protected !!