Wednesday, May 15, 2024
spot_imgspot_img
spot_imgspot_img

ಮಂಗಳೂರು: ಕುಡುಕನಿಗೆ ಸಿಕ್ಕ ಹಣದ ಬ್ಯಾಗ್‌ಗೆ ಪ್ರಕರಣಕ್ಕೆ ಟ್ವಿಸ್ಟ್‌; ಠಾಣೆಗೆ ಆಗಮಿಸಿದ ವಾರಸುದಾರ..?

- Advertisement -G L Acharya panikkar
- Advertisement -

ಮಂಗಳೂರು: ಪಂಪ್‌ವೆಲ್‌ನಲ್ಲಿ ಕುಡುಕನಿಗೆ ನೋಟಿನ ಬ್ಯಾಗ್‌ ದೊರೆತಿದ್ದು, ಸುದ್ದಿ ವೈರಲ್ ಅಗುತ್ತಿದ್ದಂತೆ ಭಾರೀ ಸಂಚಲನ ಕೂಡ ಮೂಡಿತ್ತು. ಇದೀಗ ಪತ್ತೆಯಾಗಿದ್ದ ನೋಟುಗಳ ವಾರಸುದಾರ ಎನ್ನಲಾದ ವ್ಯಕ್ತಿಯೋರ್ವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ ಎಂದು ವರದಿಯಾಗಿದೆ.

ಠಾಣೆಗೆ ಹಾಜರಾದ ವ್ಯಕ್ತಿ ತಾನು ಅಡಿಕೆ ವ್ಯಾಪಾರಿಯಾಗಿದ್ದು ಹಣ ತೆಗೆದುಕೊಂಡು ಹೋಗುವಾಗ ಬಿದ್ದಿದೆ. ಅದರಲ್ಲಿ ಒಟ್ಟು 10 ಲ.ರೂ ಇತ್ತು ಎಂಬುದಾಗಿ ಆ ವ್ಯಕ್ತಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ದೃಢಪಡಿಸಿ ಇತ್ಯರ್ಥ ಮಾಡಿಕೊಳ್ಳುವಂತೆ ಪೊಲೀಸರು ಆ ವ್ಯಕ್ತಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ನ.26 ರಂದು ಕುಡುಕನೋರ್ವನಿಗೆ ಪಂಪ್‌ವೆಲ್‌ ಬಳಿ ನೋಟಿನ ಬ್ಯಾಗ್‌ ದೊರೆತಿದ್ದು, ವಿಷಯ ತಿಳಿದ ಪೊಲೀಸರು ಕುಡುಕನ ಬಳಿ ಇದ್ದ 49,000 ರೂ.ಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ಮತ್ತೋರ್ವರ ಮನೆಯವರು ಪೊಲೀಸರಿಗೆ 2.99 ಲಕ್ಷ ರೂ.ಗಳನ್ನು ತಂದು ಒಪ್ಪಿಸಿದ್ದರು.ಆದರೆ ಹಣದ ಮೂಲ ಪತ್ತೆಯಾಗಿರಲಿಲ್ಲ. ಬಂಡಲ್‌ಗಳಲ್ಲಿ ಒಟ್ಟು ಎಷ್ಟು ಹಣವಿತ್ತು ಎಂಬುದೂ ಗೊತ್ತಾಗಿರಲಿಲ್ಲ. ಈ ಬಗ್ಗೆ ಕಮಿಷನರ್ ಪ್ರತಿಕ್ರಿಯಿಸಿ ಹಣದ ವಾರಸುದಾರರು ಇದ್ದರೆ ಸಂಪರ್ಕಿಸುವಂತೆ ಕೇಳಿದ್ದರು. ಸೂಕ್ತ ದಾಖಲೆ ಸಲ್ಲಿಸಿ ಹಣ ಪಡೆದುಕೊಳ್ಳುವಂತೆ ಹೇಳಿದ್ದರು. ಇದಲ್ಲದೆ ಬಾಕ್ಸ್ ನಲ್ಲಿ 10 ಲಕ್ಷ ಇತ್ತು ಎಂದು ಹೇಳಲಾಗಿತ್ತು.ಈ ಬಗ್ಗೆ ಎಷ್ಟು ಹಣ ಇತ್ತು ಎನ್ನುವ ಬಗ್ಗೆ ಸಂಶಯ ಕೂಡ ಮೂಡಿತ್ತು.

- Advertisement -

Related news

error: Content is protected !!