Friday, May 3, 2024
spot_imgspot_img
spot_imgspot_img

ಇನ್ಸ್ಟಾಗ್ರಾಮ್ ಖಾತೆಯ ಮೂಲಕ 90 ಸಾವಿರ ರೂ. ವಂಚನೆ

- Advertisement -G L Acharya panikkar
- Advertisement -

ಮಂಗಳೂರು: ಇನ್‌ಸ್ಟಾ ಖಾತೆಯ ಮೂಲಕ 90 ಸಾವಿರ ರೂ. ವಂಚನೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಇನ್‌ಸ್ಟಾಗ್ರಾಂ ಖಾತೆಯನ್ನು ವೀಕ್ಷಿಸುತ್ತಿರುವಾಗ ಅವರ ಗೆಳೆಯನ ಖಾತೆಯಿಂದ “ರಿಸಿವ್ಡ್ ರುಪೀಸ್‌ 4,16,000 ಇನ್‌ ಯುವರ್‌ ಇನ್‌ಸ್ಟಾಗ್ರಾಂ ವಾಲೆಟ್‌’ ಎಂಬ ಪೋಸ್ಟ್‌ ಬಂದಿದೆ. ತಕ್ಷಣ ಅವರಿಗೆ “ಲಿಝಿ ಹೋಪರ್‌’ ಎನ್ನುವ ಇನ್ನೊಂದು ಖಾತೆಯಿಂದ ಸಂದೇಶಗಳು ಬರಲು ಆರಂಭಿಸಿದ್ದು, ತನ್ನ ಗೆಳೆಯನ ಇನ್‌ಸ್ಟಾಗ್ರಾಂ ಖಾತೆ ಎಂದು ನಂಬಿ 40,000 ರೂ. ಮತ್ತು ಕ್ಯಾಶ್‌ ವಿಡ್ರಾವಲ್‌ ಪಿನ್‌ ಫೀ ಎಂದು 50000 ರೂ.ಯನ್ನು ವರ್ಗಾಯಿಸಿದ್ದಾರೆ. ಬಳಿಕ ಇನ್ನೂ 70,000 ರೂ. ಹಣವನ್ನು ವರ್ಗಾಯಿಸಲು ತಿಳಿಸಿದ್ದು, ಈ ಬಗ್ಗೆ ಗೆಳೆಯನಿಗೆ ಕರೆ ಮಾಡಿದಾಗ ಆತ “ತನ್ನ ಖಾತೆಯು ಸುಮಾರು 6 ತಿಂಗಳಿನಿಂದ ಹ್ಯಾಕ್‌ ಆಗಿರುವುದಾಗಿ’ ತಿಳಿಸಿದ್ದಾನೆ.

ಅಪರಿಚಿತರು ಗೆಳೆಯನ ಇನ್‌ಸ್ಟಾಗ್ರಾಂ ಖಾತೆಯನ್ನು ಹ್ಯಾಕ್‌ ಮಾಡಿ ಅದರಲ್ಲಿ ಬಿಟ್‌ಕಾಯಿನ್‌ ಜಾಹೀರಾತು ಕಳುಹಿಸಿ 90 ಸಾವಿರ ರೂ. ಮೋಸದಿಂದ ವರ್ಗಾಯಿಸಿಕೊಂಡಿದ್ದಾರೆ. ವಂಚನೆ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿದ್ದು, ಮಂಗಳೂರು ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!