Saturday, May 18, 2024
spot_imgspot_img
spot_imgspot_img

ಮಂಗಳೂರು: ಕೆಮಿಕಲ್ಸ್ ಪ್ರೈವೇಟ್ ಲಿ. ಕಂಪೆನಿಯಲ್ಲಿ ಅಗ್ನಿ ಅವಘಡ

- Advertisement -G L Acharya panikkar
- Advertisement -

ಮಂಗಳೂರು: ಸುರತ್ಕಲ್ ಸಮೀಪದ ಎಸ್‌ಇಝಡ್‌ನಲ್ಲಿರುವ ಕ್ಯಾಟಸಿಂತ್ ಫರ್ಫ್ಯೂಮ್ ಕೆಮಿಕಲ್ಸ್ ಪ್ರೈವೇಟ್ ಲಿ. ಕಂಪೆನಿಯಲ್ಲಿ ಇಂದು ಮತ್ತೆ ಬೆಂಕಿ ಅನಾಹುತ ಸಂಭವಿಸಿದೆ. ಇದರಿಂದ ಭಾರೀ ಪ್ರಮಾಣದ ಹೊಗೆ ಪರಿಸರದಲ್ಲಿ ಹರಡಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.

ಈ ಕಂಪೆನಿಯಲ್ಲಿ ಕಳೆದ ಕೆಲ ತಿಂಗಳ ಹಿಂದೆಯೂ ಅಗ್ನಿ ಅವಘಡ ಸಂಭವಿಸಿದೆ. ಅದರ ದುರಸ್ತಿ ಕಾರ್ಯವು ಮುಂದುವರಿದಿದ್ದು, ವೆಲ್ಡಿಂಗ್ ಮಾಡುವ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಕಂಪೆನಿ ಖಚಿತ ಮಾಹಿತಿ ವ್ಯಕ್ತಪಡಿಸಿಲ್ಲ. ಕಂಪೆನಿಯಲ್ಲಿ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಘಟನಾ ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿ ನೀಡಿದರು. ಕದ್ರಿ ಅಗ್ನಿಶಾಮಕ ದಳ, ಎಚ್‌ಪಿಸಿಎಲ್, ಎನ್‌ಎಂಪಿಟಿ ಸಿಬ್ಬಂದಿ ವರ್ಗ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.

- Advertisement -

Related news

error: Content is protected !!