Friday, April 26, 2024
spot_imgspot_img
spot_imgspot_img

ಮಂಗಳೂರು: ತಡರಾತ್ರಿ ವಾಹನಗಳನ್ನು ಜಖಂ ಗೊಳಿಸಿದ ಅಪರಿಚಿತ ವ್ಯಕ್ತಿ.! ಹಿಡಿದು ಪೊಲೀಸರಿಗೆ ಒಪ್ಪಿಸಿದ ರಾಮ್ ಸೇನಾ ಕಾರ್ಯಕರ್ತರು..!!

- Advertisement -G L Acharya panikkar
- Advertisement -

vtv vitla
vtv vitla

ಮಂಗಳೂರು : ನಗರದಲ್ಲಿ ರಾತ್ರಿ ವೇಳೆಯಲ್ಲಿ ಕಳ್ಳತನ ಹೆಚ್ಚುತ್ತಿದ್ದು, ಒಬ್ಬ ಅನುಮಾನಸ್ಪದ ವ್ಯಕ್ತಿಯೊಬ್ಬನನ್ನು ರಾಮ್ ಸೇನಾ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಧಾರ್ಮಿಕ ಕೇಂದ್ರಗಳ ರಕ್ಷಣೆ ನಮ್ಮ ಹೊಣೆ ಎಂಬ ನಿಟ್ಟಿನಲ್ಲಿ ರಾಮ್ ಸೇನಾ, ಅಗಸ್ತ್ಯ ಘಟಕ, ಉರ್ವಸ್ಟೋರ್ ಇದರ ಕಾರ್ಯಕರ್ತರು ಕೋಡಿಕಲ್ ಪರಿಸರದಲ್ಲಿ ರಾತ್ರಿ ಪಹರೆ ಕಾಯುತ್ತಿದ್ದ ಸಂದರ್ಭದಲ್ಲಿ, ಇತ್ತೀಚಿನ ದಿನಗಳಲ್ಲಿ ಕೋಡಿಕಲ್ ಪರಿಸರದಲ್ಲಿ ನಾಗ ಬನ ಅಪವಿತ್ರ ಹಾಗೆ ದೈವದ ಸೊತ್ತುಗಳ ಕಳ್ಳತನ ಪ್ರಕರಣ ನಡೆದಿರುವುದರಿಂದ ಸ್ವತಃ ಸಂಘಟನೆ ಕಾರ್ಯಕರ್ತರೆ ಪಹರೆ ನಡೆಸುವಂತಹ ಪ್ರಸಂಗ ಎದುರಾಗಿದೆ.

ಈ ಸಂದರ್ಭದಲ್ಲಿ ಸುಮಾರು 1.30 ಗಂಟೆಯ ಆಸುಪಾಸು ಕೋಡಿಕಲ್ ಪರಿಸರದಲ್ಲಿ 2 ವಾಹನಗಳನ್ನು ಜಖಂ ಗೊಳಿಸಿ ಕೈಯಲ್ಲಿ ಮರದ ತುಂಡನ್ನು ಹಿಡಿದುಕೊಂಡು ಒಬ್ಬ ವ್ಯಕ್ತಿಯು ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದು, ಆ ವ್ಯಕ್ತಿಯನ್ನು ಅಗಸ್ತ್ಯ ಘಟಕದ ಕಾರ್ಯಕರ್ತರು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೋಲೀಸರ ವಿಚಾರಣೆಯ ಮೇರೆಗೆ ವ್ಯಕ್ತಿಯು ತನ್ನ ಹೆಸರು ಅಬ್ದುಲ್ ನಿಸಾರ್ ಹಾಗೂ ಊರು ಕೊಯಿಕ್ಕೊಡ್, ಕೇರಳ ಎಂದು ಹೇಳಿರುತ್ತಾನೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಮ್ ಸೇನಾ ಜಿಲ್ಲಾ ಅಧ್ಯಕ್ಷ ಕಿರಣ್ ಅಮೀನ್ ಉರ್ವಸ್ಟೋರ್ “ಇತ್ತೀಚಿನ ದಿನಗಳಲ್ಲಿ ನಮ್ಮ ಹಿಂದೂ ಧಾರ್ಮಿಕ ಕ್ಷೇತ್ರಗಳ್ಳನ್ನು ಅಪವಿತ್ರ ಗೊಳಿಸುವಂತಹ ಬಹಳಷ್ಟು ಪ್ರಸಂಗಗಳು ಕಂಡು ಬರ್ತಾ ಇವೆ, ಈ ನಿಟ್ಟಿನಲ್ಲಿ ನಮ್ಮ ಶ್ರದ್ದಾ ಕೇಂದ್ರಗಳನ್ನು ನಾವೇ ರಕ್ಷಿಸಿ ಕೊಳ್ಳಬೇಕಾದ ಪರಿಸ್ಥಿತಿ ಎದುರಗಿದೆ, ಮಸೀದಿ ಗಳ ಮುಂದೆ ಪಹರೆಗೆ ಪೊಲೀಸರನ್ನು ನೇಮಿಸುವ ಸರಕಾರಕ್ಕೆ ದೇವಸ್ಥಾನ, ದೈವಸ್ಥಾನ ಹಾಗೂ ನಾಗ ಬನಗಳ ಬಗ್ಗೆ ಯಾಕಿಂತ ಅಸಡ್ಡೆ ಎಂದು ಪ್ರಶ್ನಿಸಿದರು. ಹಾಗೆಯೇ ಪ್ರತಿಯೊಂದು ಹಿಂದೂ ಶ್ರದ್ದಾ ಕೇಂದ್ರಗಳ ಮುಂದೆ ರಕ್ಷಣೆಗೆ ಪೊಲೀಸ್ ಅನ್ನು ನಿಯೋಜಿಸಬೇಕೆಂದು” ಜಿಲ್ಲಾಡಳಿತವನ್ನು ಆಗ್ರಹಿಸಿದರು.

vtv vitla
- Advertisement -

Related news

error: Content is protected !!