Saturday, May 4, 2024
spot_imgspot_img
spot_imgspot_img

ಮಂಗಳೂರು: ನಾಳೆಯಿಂದ ಬೃಹತ್ ಉದ್ಯೋಗ ಮೇಳ

- Advertisement -G L Acharya panikkar
- Advertisement -

ಮಂಗಳೂರು: ವಿಶ್ವವಿದ್ಯಾನಿಲಯದ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಹಾಗೂ ತರಬೇತಿ ಮತ್ತು ನಿಯೋಜನಾ ಘಟಕಗಳು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಮಂಗಳಗಂಗೋತ್ರಿಯ ವಿಶ್ವವಿದ್ಯಾನಿಲಯದಲ್ಲಿ ಮೇ 14 ಮತ್ತು 15 ರಂದು ಉದ್ಯೋಗ ಮೇಳ ಆಯೋಜಿಸಿವೆ.

ಸುಮಾರು 40 ಕಂಪೆನಿಗಳು, 11,000 ಹುದ್ದೆಗಳ ನಿರೀಕ್ಷೆ..!

ಎರಡು ದಿನಗಳ ಉದ್ಯೋಗ ಮೇಳದಲ್ಲಿ ದೇಶದ ವಿವಿಧೆಡೆಯಿಂದ ಸುಮಾರು 40 ಕಂಪನಿಗಳು ಆಗಮಿಸಲಿವೆ. ಸುಮಾರು 11,100 ಹುದ್ದೆಗಳ ನೇಮಕಾತಿ ನಡೆಯುವ ಅಂದಾಜಿದೆ.

UEIGB, UTPC, ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಘಟಕ, ಸಂಯೋಜಿತ, ಸ್ವಾಯತ್ತ ಕಾಲೇಜುಗಳು ಮತ್ತು ಮಂಗಳೂರು ವಿವಿ ಕ್ಯಾಂಪಸ್‌ನ ಸುಮಾರು 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಗಳನ್ನು ಮ್ಯಾಜಿಕ್ ಬಸ್ ಎಂಬ NGOಗೆ ಹಸ್ತಾಂತರಿಸಲಾಗಿದೆ. ಈ ಸಂಸ್ಥೆ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಟೋಕನ್ ಒದಗಿಸಿ ನೇಮಕಾತಿಗೆ ನೇರ ಸಂದರ್ಶನ ನಡೆಸಲಿದೆ. ಕನಿಷ್ಠ ವೇತನ ರೂ. 10,000 ಇರಲಿದೆ.

ಸ್ಥಳದಲ್ಲೇ ನೋಂದಣಿಗೂ ಅವಕಾಶ

ಅಭ್ಯರ್ಥಿಗಳು ಸ್ಥಳದಲ್ಲೇ ತಮ್ಮ ಹೆಸರು ನೋಂದಾಯಿಸಿ ನೇರ ಸಂದರ್ಶನದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ಬಯೋಡಾಟ, ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಳತೆಯ ಫೋಟೋ, SSLC ಅಂಕಪಟ್ಟಿಯ ಜೊತೆಗೆ ಗರಿಷ್ಠ ಅರ್ಹತೆಯ ಅಂಕಪಟ್ಟಿಯನ್ನು ತರಬೇಕು. ಶೈಕ್ಷಣಿಕ ವರ್ಷದಲ್ಲಿ ಇರುವ (ಪದವಿ ಅಥವಾ ಸ್ನಾತಕೋತ್ತರ ಪದವಿ ಓದುತ್ತಿರುವ) ವಿದ್ಯಾರ್ಥಿಗಳೂ ಸಂದರ್ಶನಕ್ಕೆ ಹಾಜರಾಗಬಹುದು.

ಮಂಗಳೂರು ವಿಶ್ವವಿದ್ಯಾನಿಲಯದ ಹ್ಯುಮಾನಿಟೀಸ್ (ಮಾನವಿಕ), ಮ್ಯಾನೇಜ್ಮೆಂಟ್ (ನಿರ್ವಹಣೆ), ಸೈನ್ಸ್ (ವಿಜ್ಞಾನ) ಮತ್ತು ಲೆಕ್ಚರ್ ಕಾಂಪ್ಲೆಕ್ಸ್‌ಗಳನ್ನು ಉದ್ಯೋಗ ಮೇಳಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಪ್ರತಿಯೊಂದರಲ್ಲೂ ಸಹಾಯವಾಣಿ ಇರಲಿದೆ.

ಉದ್ಯೋಗ ಮೇಳಕ್ಕೆ 80 ಕ್ಕೂ ಹೆಚ್ಚು ಸ್ವಯಂಸೇವಕರನ್ನು ನೇಮಿಸಲಾಗಿದೆ. ಉದ್ಯೋಗದಾತ ಕಂಪನಿಗಳ ಸಿಬ್ಬಂದಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗುವುದು. ಸುಗಮ ಸಾರಿಗೆ ಸಂಚಾರಕ್ಕೂ ವ್ಯವಸ್ಥೆ ಮಾಡಲಾಗಿದೆ.

ಭಾಗಿಯಾಗುವ ಪ್ರಮುಖ ಕಂಪನಿಗಳು

ಅಪೋಲೋ ಫಾರ್ಮಸಿ, ಮುತ್ತೂಟ್ ಫೈನಾನ್ಸ್, ಮೆಡಿಪ್ಲಸ್, ಜಸ್ಟ್ ಡಯಲ್, ಬೈಜೂಸ್, ಆಕ್ಸಿಸ್ ಬ್ಯಾಂಕ್, ಕಾಂಚನಾ ಗ್ರೂಪ್ ಆಫ್ ಕಂಪೆನೀಸ್, ಹೋಂಡಾ ಮ್ಯಾಟ್ರಿಕ್ಸ್, ದಿಯಾ ಸಿಸ್ಟಮ್ಸ್, ಹೆಚ್ಡಿಎಫ್ಸಿ ಬ್ಯಾಂಕ್, ಮಾಂಡೊವಿ ಮೋಟರ್ಸ್, ಮೋರ್ ಸೂಪರ್ ಮಾರ್ಕೆಟ್ ಸೇರಿದಂತೆ 40 ಕ್ಕೂ ಹೆಚ್ಚು ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.

ಹೆಚ್ಚಿನ ಮಾಹಿತಿಗಾಗಿ:

ಶಾರದಾ ಹೆಚ್ ಸೋಮಯಾಜಿ, ಯುಟಿಪಿಸಿ ಯೋಜನೆ ಆಧರಿತ ಸಲಹೆಗಾರ್ತಿ- 63630 22303

- Advertisement -

Related news

error: Content is protected !!