Sunday, May 5, 2024
spot_imgspot_img
spot_imgspot_img

ಮಂಗಳೂರು: ಪದವಿ ಸ್ವೀಕರಿಸುವವರಿಗೆ “ವಸ್ತ್ರ ಸಂಹಿತೆ’ ಕಡ್ಡಾಯ…!

- Advertisement -G L Acharya panikkar
- Advertisement -
vtv vitla

ಮಂಗಳೂರು: ಮಂಗಳೂರು ವಿ.ವಿ. ಘಟಿಕೋತ್ಸವ ಸಂದರ್ಭ ರಾಜ್ಯಪಾಲರಿಂದ ಪದವಿ ಸ್ವೀಕರಿಸುವ ವಿದ್ಯಾರ್ಥಿಗಳು ಈ ಬಾರಿ ಕಡ್ಡಾಯವಾಗಿ “ವಸ್ತ್ರ ಸಂಹಿತೆ’ ಪಾಲಿಸಬೇಕು, ಇಲ್ಲವಾದರೆ ವೇದಿಕೆಯ ಮೇಲೆ
ಪದವಿ ಸ್ವೀಕರಿಸಲು ಅನುಮತಿ ಇಲ್ಲ.

ವಿ.ವಿ.ಯ 40ನೇ ವಾರ್ಷಿಕ ಘಟಿಕೋತ್ಸವ ಎ. 23ರ ಬೆಳಿಗ್ಗೆ 11ಕ್ಕೆ ಮಂಗಳ ಗಂಗೋತ್ರಿಯಲ್ಲಿ ನಡೆಯಲಿದೆ. ಈ ವೇಳೆ ಪದವಿ ಪಡೆಯುವವರು ಪೂರ್ಣ ಬಿಳಿ ಬಣ್ಣದ ಉಡುಗೆ ಧರಿಸಿರಬೇಕು. ನಿಯಮ ಪಾಲಿಸದಿದ್ದರೆ ವೇದಿಕೆಯಲ್ಲಿ ಸರ್ಟಿಫಿಕೇಟ್ ಸಿಗದು, ಅವರು ಕಾರ್ಯಕ್ರಮ ಮುಗಿದ ಬಳಿಕ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ.

ಘಟಿಕೋತ್ಸವದಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳು ಸಮವಸ್ತ್ರ ನಿಯಮ ಪಾಲಿಸುವಂತೆ ನಿರ್ದೇಶನ ಈ ಹಿಂದೆಯೇ ಇತ್ತು . ಆದರೂ ಕೆಲವು ವಿದ್ಯಾರ್ಥಿಗಳು ಬಣ್ಣ ಬಣ್ಣದ ಬಟ್ಟೆ ಧರಿಸಿ ಬಂದು ಪದವಿ ಪಡೆಯುತ್ತಿದ್ದರು. ಇದು ವಿ.ವಿ.ಯ ಶೈಕ್ಷಣಿಕ ಶಿಸ್ತಿಗೆ ವಿರುದ್ಧವಾದದ್ದು ಎಂದು ವಸ್ತ್ರ ಸಂಹಿತೆ ಕಡ್ಡಾಯ ಪಾಲನೆಗೆ ಈ ಬಾರಿ ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ದಾಖಲಾತಿ ಪಡೆಯುವ ಸಂದರ್ಭ ಈ ಸೂಚನೆಯನ್ನು ಮಂಗಳೂರು ವಿ.ವಿ. ನೀಡಲಿದೆ ಎಂದು ಮಂಗಳೂರು ವಿ.ವಿ. ಕುಲಸಚಿವ ಪ್ರೊ| ಪಿ.ಎಲ್. ಧರ್ಮ ಹೇಳಿದ್ದಾರೆ.

ಮಂಗಳೂರು ವಿ.ವಿ.ಯ ಈ ಹಿಂದಿನ ಘಟಿಕೋತ್ಸವ ಸಂದರ್ಭ ಚಿನ್ನದ ಪದಕ ನೀಡಿರಲಿಲ್ಲ. ಯಾಕೆಂದರೆ ಚಿನ್ನದ ಮೌಲ್ಯ ದುಪ್ಪಟ್ಟಾಗಿತ್ತು . ಬದಲಾಗಿ, ಅವರಿಗೆ “ನಗದು ಬಹುಮಾನ ಪರಿವರ್ತಿತ’ ಎಂಬ ಮಾದರಿಯಲ್ಲಿ ನೀಡಲಾಗುತ್ತಿತ್ತು . ಈ ಬಾರಿ ಚಿನ್ನದ ಪದಕ ಪಡೆಯಲಿರುವವರಿಗೆ ಚಿನ್ನದ ಪದಕವನ್ನೇ ನೀಡಬೇಕು ಎಂದು ವಿ.ವಿ. ಚಿಂತನೆ ನಡೆಸಿದೆ. ಘಟಿಕೋತ್ಸವದ ಮುನ್ನಾ ದಿನ ವಿದ್ಯಾರ್ಥಿಗಳು ವಿ.ವಿ.ಗೆ ಆಗಮಿಸಿ ದಾಖಲಾತಿ ಮಾಡಬೇಕು. ಆದರೆ ದೂರದ ಕೆಲವು ವಿದ್ಯಾರ್ಥಿಗಳಿಗೆ ಇದು ಸಮಸ್ಯೆ ಹೀಗಾಗಿ ಈ ಪ್ರಕ್ರಿಯೆಯನ್ನು ಆನ್ ಲೈನ್ ಮಾಡುವ ಬಗ್ಗೆಯೂ ವಿ.ವಿ. ಚಿಂತನೆ ನಡೆಸಿದೆ.

ಮಂಗಳೂರು ವಿ.ವಿ.ಯ ಬಹುಮಹತ್ವದ “ಗೌರವ ಡಾಕ್ಟ ರೇಟ್’ ಈ ಬಾರಿ ಇಬ್ಬರು ಅಥವಾ ಮೂವರಿಗೆ ಸಿಗುವ ಸಾಧ್ಯತೆ ಇದೆ. ವಿ.ವಿ.ಯಿಂದ ಸುಮಾರು 10 ಮಂದಿಯ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು . ಈ ಪೈಕಿ ಆಂತರಿಕ ತಂಡ 2-3 ಮಂದಿಯನ್ನು ಅಂತಿಮ ಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಳೆದ ವರ್ಷ ಗೌರವ ಡಾಕ್ಟರೇಟ್ ನೀಡಿರಲಿಲ್ಲ . ಅದಕ್ಕೂ ಹಿಂದಿನ ವರ್ಷ ಒಬ್ಬರಿಗೆ ಮಾತ್ರ ಪ್ರಧಾನ ಮಾಡಲಾಗಿತ್ತು . ರಾಜ್ಯದ ಇತರ ವಿ.ವಿ.ಗಳಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವಗಳಲ್ಲಿ ಸರಾಸರಿ ಮೂವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಹೀಗಾಗಿ ಮಂಗಳೂರು ವಿ.ವಿ.ಯಲ್ಲಿಯೂ ಇಬ್ಬರು ಅಥವಾ ಮೂವರಿಗೆ ಈ ಗೌರವ ಲಭಿಸ ಬಹುದೆನ್ನುವ ನಿರೀಕ್ಷೆಗೆ ಪುಷ್ಟಿ ದೊರೆತಿದೆ. ಈ ಬಾರಿಯ ಘಟಿಕೋತ್ಸವ ಹಲವು ವಿಶೇಷಗಳನ್ನು ಒಳಗೊಂಡಿದೆ. ಇದೇ ಮೊದಲ ಬಾರಿಗೆ ರಾಜ್ಯಪಾಲರು ಘಟಿಕೋತ್ಸವದಲ್ಲಿ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ. ವಿಶೇಷವಾಗಿ ಪದವಿ
ಸ್ವೀಕರಿಸುವವರು ಕಡ್ಡಾಯವಾಗಿ ವಿ.ವಿ. ಸೂಚಿಸುವ ಡ್ರೆಸ್ ಕೋಡ್ ಪಾಲಿಸಬೇಕು. ಈ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗುತ್ತಿದೆ.

-ಪ್ರೊ| ಪಿ.ಎಸ್.ಯಡಪಡಿತ್ತಾಯ,
ಕುಲಪತಿಗಳು, ಮಂಗಳೂರು ವಿ.ವಿ

- Advertisement -

Related news

error: Content is protected !!