Friday, May 17, 2024
spot_imgspot_img
spot_imgspot_img

ಮಂಗಳೂರು: ಪೊಲೀಸರಿಂದ ಹಳೆಯ ಪ್ರಕರಣಗಳ ಬಾಕಿ ವಸೂಲಿ.! ಒಂದೇ ದಿನ ಬರೋಬ್ಬರಿ 5 .71 ಲಕ್ಷಗಳಿಗೂ ಅಧಿಕ ದಂಡ ವಸೂಲಿ

- Advertisement -G L Acharya panikkar
- Advertisement -

ಮಂಗಳೂರು : ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ/ಚಾಲಕರ ಮೇಲೆ ಮಂಗಳೂರು ಪೊಲೀಸರು ಹಮ್ಮಿಕೊಂಡಿರುವ ಆರು ದಿನಗಳ ವಿಶೇಷ ಕಾರ್ಯಾಚರಣೆ ಇಂದು ಕೊನೆಗೊಳ್ಳಲಿದೆ.

ಈ ಹಿಂದೆ ಸಂಚಾರ ನಿಯಮ ಉಲ್ಲಂಘನೆ ದೃಶ್ಯ ಸಿಸಿ ಕ್ಯಾಮರಗಳಲ್ಲಿ ದಾಖಲಾಗಿದ್ದು, ಪೊಲೀಸರ ಮೊಬೈಲ್‌ನಲ್ಲಿ ದಾಖಲಾಗಿದೆ. ಸಾರ್ವಜನಿಕರೇ ದಾಖಲೆ ಸಮೇತ ದೂರು ನೀಡಿದ್ದ ಸಹಿತ ಸಂಚಾರಿ ಪೊಲೀಸ್ ವಿಭಾಗದ ಆಟೋಮೇಶನ್ ಸೆಂಟರ್‌ನಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಪೊಲೀಸರು ನೋಟಿಸ್ ಕಳುಹಿಸಿದರೂ ದಂಡ ಪಾವತಿಸದೆ ನಿರ್ಲಕ್ಷಿಸಿದ ಸವಾ ರರು/ಚಾಲಕರಿಂದ ದಂಡ ವಸೂಲಿ ಮಾಡಲಾಯಿತು. ಇಂದು ಸಂಚಾರ ಪೊಲೀಸರು ವಾಹನಗಳ ಹೊಗೆ ತಪಾಸಣೆಯ (ಎಮಿಶನ್ ಟೆಸ್ಟ್) ದಾಖಲೆಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಳ್ಳಲಿದ್ದಾರೆ.

ಸೆ. 27ರಂದು ಕಾರ್ಯಾಚರಣೆ ಆರಂಭಗೊoಡಿದ್ದು, ಒಂದೊoದು ದಿನ ಒಂದೊoದು ರೀತಿಯ ಉಲ್ಲಂಘನೆ ಪ್ರಕರಣಗಳನ್ನು ಕೇಂದ್ರೀಕರಿಸಿ ತಪಾಸಣೆ ನಡೆಸಲಾಗಿದೆ. ಮೊದಲ ನಾಲ್ಕು ದಿನಗಳಲ್ಲಿ ಟಿಂಟೆಡ್ ಗ್ಲಾಸ್, ನಂಬರ್‌ಪ್ಲೇಟ್ ದೋಷ, ಹೆಲ್ಮೆಟ್, ವಿಮೆ ತಪಾಸಣೆ ನಡೆದಿದ್ದು, 5ನೇ ದಿನವಾದ ಶುಕ್ರವಾರ ಹಳೆಯ ಪ್ರಕರಣಗಳ ಬಗ್ಗೆ ತಪಾಸಣೆ ನಡೆಸಿದರು.

ಶುಕ್ರವಾರದಂದು ಹಳೆಯ ಪ್ರಕರಣಗಳಿಗೆ ಸಂಬoಧಿಸಿದoತೆ ಪೊಲೀಸರು ಸಾವಿರಕ್ಕೂ ಅಧಿಕ ವಾಹನ ಸವಾರರು/ ಚಾಲಕರಿಂದ 5 .71 ಲ.ರೂ.ಗಳಿಗೂ ಅಧಿಕ ದಂಡ ವಸೂಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!