Sunday, June 7, 2026
spot_imgspot_img
spot_imgspot_img

ಮಂಗಳೂರು: ಪ್ರಧಾನಿ ಮೋದಿಗೆ ಪರಶುರಾಮನ ವಿಗ್ರಹ ಸ್ಮರಣಿಕೆ

- Advertisement -
- Advertisement -

ಮಂಗಳೂರು: ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸಕ್ಕಾಗಿ ಪರಶುರಾಮನ ಕ್ಷೇತ್ರ ತುಳುನಾಡಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪರಶುರಾಮನ ವಿಗ್ರಹವನ್ನು ಸ್ಮರಣಿಕೆಯಾಗಿ ನೀಡಲಾಯಿತು.

ಸಂಸದ ನಳಿನ್‌ಕುಮಾರ್ ಕಟೀಲು, ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ಕುಮಾರ್, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ ಅವರು ಪರಶುರಾಮನ ವಿಗ್ರಹವನ್ನು ಪ್ರಧಾನಿಯವರಿಗೆ ಹಸ್ತಾಂತರಿಸಿದರು. ಅಲ್ಲದೆ, ಕರಾವಳಿ ಕಂಪನ್ನು ಸೂಸುವ ಮಲ್ಲಿಗೆ ಹಾರವನ್ನು ತೊಡಿಸಿ ಶಾಲು ಹೊದಿಸಿ ಕರಾವಳಿ ಸಂಪ್ರದಾಯದಂತೆ ಪ್ರಧಾನಿಯವರಿಗೆ ಸ್ವಾಗತ ಕೋರಲಾಯಿತು.

ಇದಕ್ಕೂ ಮುನ್ನ ಪ್ರಧಾನಿಯವರಿಗೆ ಪೇಟ ತೊಡಿಸಿ ಶಾಲು ಹಾಕಿ ಶ್ರೀ ಕೃಷ್ಣನ ಮೂರ್ತಿಯನ್ನು ಕೇಂದ್ರ ಸಚಿವ ಸರ್ಬಾನಂದ್ ಸೊನೆವಾಲ್ ಅವರು ನೀಡಿದರು.

- Advertisement -

Related news

error: Content is protected !!