Saturday, August 1, 2026
spot_imgspot_img
spot_imgspot_img

ಬಂಟ್ವಾಳ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ- ಆರೋಪಿಗೆ 2.6 ವರ್ಷ ಜೈಲು, 40 ಸಾವಿರ ದಂಡ

- Advertisement -
- Advertisement -

ಬಂಟ್ವಾಳ : ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಮಂಗಳೂರಿನ FTSC-I ನ್ಯಾಯಾಲಯ 2 ವರ್ಷ 6 ತಿಂಗಳು ಕಾರಾಗೃಹ ಮತ್ತು 40,000 ರೂ ದಂಡ ವಿಧಿಸಿದೆ.

ದಿನಾಂಕ 23.06.2025 ರಂದು ನಡೆದ ಈ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ: 79/2025 ದಾಖಲಾಗಿತ್ತು. ಪ್ರಕರಣವು ಪೋಕ್ಸೋ ಆಕ್ಟ್ 2012ರ ಕಲಂ 11, 12 ಹಾಗೂ BNS 2023ರ ಕಲಂ 75(i)(ii), 79ರ ಅಡಿಯಲ್ಲಿ ದಾಖಲಾಗಿತ್ತು.

ಮಣಿನಾಲ್ಕೂರು ನಿವಾಸಿ ಮೋನಪ್ಪ ನಾಯ್ಕ(52) ಪ್ರಕರಣದ ಆರೋಪಿ.

ಪ್ರಕರಣದ ತನಿಖೆಯನ್ನು ಅಂದಿನ ತನಿಖಾಧಿಕಾರಿಗಳಾದ ಕೀರಪ್ಪ ಘಟಕಾಂಬಳೆ, ಪಿಎಸ್ಐ ಮತ್ತು ಕೃಷ್ಣಕಾಂತ ಪಾಟೀಲ್, ಪಿಎಸ್ಐ ನಡೆಸಿದ್ದರು. ಸೂಕ್ತ ಸಾಕ್ಷ್ಯಗಳನ್ನು ಸಂಗ್ರಹಿಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಮಾನ್ಯ FTSC-I, ಮಂಗಳೂರು ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ್ ಜೆ.ಎಸ್ ರವರು ಜು.31 ರಂದು ತೀರ್ಪು ನೀಡಿದರು. ಸರ್ಕಾರಿ ಅಭಿಯೋಜಕಿ ಸಹನಾದೇವಿ ರವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದಿಸಿದರು.

ಮಾನ್ಯ ನ್ಯಾಯಾಲಯವು ಆರೋಪಿಗೆ U/S 74 r/w 62 BNS: 2 ವರ್ಷ 6 ತಿಂಗಳು ಶಿಕ್ಷೆ + 15,000 ರೂ ದಂಡU/S 75(2)(3) r/w 62 BNS: 1 ವರ್ಷ ಶಿಕ್ಷೆ + 10,000 ರೂ ದಂಡU/S 79 BNS: 1 ವರ್ಷ ಶಿಕ್ಷೆ + 5,000 ರೂ ದಂಡU/S 12 r/w 18 POCSO Act-2012: 1 ವರ್ಷ ಶಿಕ್ಷೆ + 10,000 ರೂ ದಂಡಒಟ್ಟಾರೆಯಾಗಿ ಆರೋಪಿಗೆ 2 ವರ್ಷ 6 ತಿಂಗಳ ಕಾರಾಗೃಹ ಮತ್ತು 40,000 ರೂ ದಂಡ ವಿಧಿಸಿ ಆದೇಶಿಸಿದೆ.

- Advertisement -

Related news

error: Content is protected !!