Thursday, March 28, 2024
spot_imgspot_img
spot_imgspot_img

ಮಂಗಳೂರು: ಫೆ.19ರಂದು ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ – ದೇವುಪೂಂಜ ಜೋಡುಕರೆ ಕಂಬಳ ತಿರುವೈಲೋತ್ಸವ

- Advertisement -G L Acharya panikkar
- Advertisement -

ಮಂಗಳೂರು: ಸಂಕುಪೂಂಜ – ದೇವುಪೂಂಜ ಜೋಡುಕರೆ ಕಂಬಳ ಟ್ರಸ್ಟ್ ತಿರುವೈಲುಗುತ್ತು, ವಾಮಂಜೂರು ಇದರ 10ನೇ ವರ್ಷದ ತುಳುನಾಡಿನ ಕಂಬಳ ತಿರುವೈಲೋತ್ಸವವು ಫೆ.19ರ ಶನಿವಾರ ನಡೆಯಲಿದೆ.

ಫೆ.19ರ ಬೆಳಗ್ಗೆ 9-00ರಿಂದ ವಾಮಂಜೂರು, ತಿರುವೈಲು ಶ್ರೀ ಅಮೃತೇಶ್ವರ ದೇವಳದ ಎದುರಿನ ತಿರುವೈಲುಗುತ್ತುವಿನ ಕಂಬಳ ಗದ್ದೆಯಲ್ಲಿ ತುಳುನಾಡಿನ ಕಂಬಳ ತಿರುವೈಲೋತ್ಸವವು ವಾಮಂಜೂರು ಮಾಗಣಿಯ ಗುತ್ತು ಹಾಗೂ ಪರವೂರ ಹತ್ತು ಸಮಸ್ತರ ಉಪಸ್ಥಿತಿಯಲ್ಲಿ ಜರಗಲಿರುವುದು.

ಕನೆಹಲಗೆ, ಹಗ್ಗವಿಭಾಗ, ನೇಗಿಲು ವಿಭಾಗ, ಅಡ್ಡ ಹಲಗೆ, ಹಾಗೂ ಎಲ್ಲಾ ವಿಭಾಗಗಳಲ್ಲಿ ವಿಜೇತ ಕೋಣಗಳನ್ನು ಓಡಿಸಿದವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುವುದು.

ಬಹುಮಾನಗಳ ವಿವರ:

  1. ಕನೆಹಲಗೆ: ಪ್ರಥಮ – 1 ಪವನು (7 1/2 ಕೋಲು ನೀರು ಹಾಯಿಸಿದ್ದಲ್ಲಿ) ದ್ವಿತೀಯ – 1/2ಪವನು (6 1/2 ಕೋಲು ನೀರು ಹಾಯಿಸಿದ್ದಲ್ಲಿ
  2. ಹಗ್ಗ ವಿಭಾಗ: ಹಿರಿಯ – ಪ್ರಥಮ 1 ಪವನು ದ್ವಿತೀಯ 1/2 ಪವನು ಕಿರಿಯ – ಪ್ರಥಮ 1 ಪವನು ದ್ವಿತೀಯ 1/2 ಪವನು
  3. ನೇಗಿಲು ವಿಭಾಗ: ಹಿರಿಯ – ಪ್ರಥಮ 1 ಪವನು ದ್ವಿತೀಯ 1/2 ಪವನು ಕಿರಿಯ – ಪ್ರಥಮ 1 ಪವನು ದ್ವಿತೀಯ 1/2 ಪವನು
  4. ಅಡ್ಡ ಹಲಗೆ: ಪ್ರಥಮ 1 ಪವನು ದ್ವಿತೀಯ 1/2 ಪವನು
vtv vitla
vtv vitla
vtv vitla
vtv vitla
- Advertisement -

Related news

error: Content is protected !!