Saturday, June 20, 2026
spot_imgspot_img
spot_imgspot_img

ಮಂಗಳೂರು: ಬಂಧುಗಳ ಮನೆಯಲ್ಲಿದ್ದ ಯುವತಿ ನಾಪತ್ತೆ; ಪತ್ತೆಗೆ ಸಹಕರಿಸುವಂತೆ ಮನವಿ

- Advertisement -
- Advertisement -

ಮಂಗಳೂರು: 5 ವರ್ಷಗಳಿಂದ ನಗರದಲ್ಲಿರುವ ಬಂಧುಗಳ ಮನೆಯಲ್ಲಿ ನೆಲೆಸಿದ್ದ ಮೂಲತಃ ನವದೆಹಲಿಯವರಾದ, ದೀಕ್ಷಿತಾ ಅಲಿಯಾಸ್‌ ರಿಯಾ ನಾಪತ್ತೆಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಿದ್ದ ಹಿನ್ನೆಲೆಯಲ್ಲಿ ಮನೆಯವರು ಬುದ್ಧಿಮಾತು ಹೇಳಿದ್ದರು ಎನ್ನಲಾಗಿದೆ. ಆದ್ರೆ ಏ 4ರಂದು ಸಂಜೆ 5 ಗಂಟೆಗೆ ಮನೆಯಿಂದ ತೆರಳಿದವರು ಮರಳಿ ಮನೆಗೆ ಬಂದಿಲ್ಲ ಎಂದು ತಿಳಿದುಬಂದಿಲ್ಲ.

ಎತ್ತರ 5.1 ಅಡಿ ಎತ್ತರ, ದುಂಡು ಮುಖ ಗೋಧಿ ಮೈಬಣ್ಣ. ಮನೆಯಿಂದ ಹೋಗುವಾಗ ಹಳದಿ ನೀಲಿ ಮಿಶ್ರಿತ ಚೂಡಿದಾರ ಧರಿಸಿದ್ದು, ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಯುವತಿ ಕಂಡುಬಂದಲ್ಲಿ ಉರ್ವ ಪೊಲೀಸ್‌ ಠಾಣೆ ಅಥವಾ ಕಂಟ್ರೋಲ್‌ ರೂಮ್‌ ಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!