- Advertisement -
- Advertisement -


ಮಂಗಳೂರು: ನಗರದ ಬೊಂದೇಲ್‍ನಲ್ಲಿರುವ ಬಾಲಕರ ಬಾಲಮಂದಿರದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸೇರಿದ 6 ರಿಂದ 17 ವರ್ಷದೊಳಗಿನ 13 ಅನಾಥ ಮಕ್ಕಳಿದ್ದಾರೆ, ಅವರನ್ನು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸಕ್ಕೆಂದು ಕರೆದೊಯ್ದಿದ್ದರು.

ಆ ಮಕ್ಕಳಿಗೆ ಪೋಷಕರಿಲ್ಲದ ನೋವು ಕಾಡಬಾರದೆಂಬ ಉದ್ದೇಶದಿಂದ ನಿನ್ನೆ ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು, ಸ್ವತಃ ಜಿಲ್ಲಾಧಿಕಾರಿಯವರೇ ಈ ಮಕ್ಕಳ ಪ್ರವಾಸಕ್ಕೆ ಬೇಕಾದ ಊಟ-ಉಪಾಹಾರ ಹಾಗೂ ವಾಹನದ ವ್ಯವಸ್ಥೆ ಕಲ್ಪಿಸಿದ್ದರು.
ಜತೆಗೆ ಸಂಜೆಯ ವೇಳೆಗೆ ಅವರು ಪಿಲಿಕುಳಕ್ಕೆ ಆಗಮಿಸಿ ಮಕ್ಕಳೊಂದಿಗೆ ಕಾಲಕಳೆದು ಅವರೊಂದಿಗೆ ಸಂವಾದ ನಡೆಸಿದರು. ಪಿಲಿಕುಳ ನಿಸರ್ಗಧಾಮದ ಆಯುಕ್ತ ವೆಂಕಟೇಶ್, ನಿರ್ದೇಶಕರು, ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸಿಬ್ಬಂದಿಗಳು ಅಚ್ಚುಕಟ್ಟಾಗಿ ಮಕ್ಕಳಿಗೆ ವ್ಯವಸ್ಥೆ ಕಲ್ಪಿಸಿದ್ದರೆ.


- Advertisement -








