Friday, April 26, 2024
spot_imgspot_img
spot_imgspot_img

ಮಂಗಳೂರು: ಬಿಷಪ್ ಹೌಸ್​ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರು ಮಂದಿಯ ವಿರುದ್ಧ ದಾಖಲಾಯ್ತು ಎಫ್‌ಐಆರ್‌

- Advertisement -G L Acharya panikkar
- Advertisement -

ಮಂಗಳೂರು: ಬಿಷಪ್ ಹೌಸ್​ನ ಮಹಿಳಾ ಸೆಕ್ರೆಟರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಬಲ್ಮಠದಲ್ಲಿರುವ ಸಿಎಸ್ಐ ಬಿಷಪ್ ಹೌಸ್​ನಲ್ಲಿ ದೌರ್ಜನ್ಯ ನಡೆದಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸದ್ಯ ಸಂತ್ರಸ್ಥ ಮಹಿಳೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆ ಸಿಎಸ್ಐ ಬಿಷಪ್ ಹೌಸ್ ಪ್ರಾಂತ ಕಚೇರಿಯ ಖಜಾಂಚಿ, ಕಾನೂನು ಸಲಹೆಗಾರ ಸೇರಿದಂತೆ 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಂತ್ರಸ್ಥ ಮಹಿಳೆ ಕಳೆದ 10 ವರ್ಷಗಳಿಂದ ಕ್ರೈಸ್ತ ಧರ್ಮದ ಪ್ರತ್ಯೇಕ ಪಂಗಡವಾದ ಚರ್ಚ್ ಆಫ್ ಸೌತ್ ಇಂಡಿಯಾ (CSI) ಬಿಷಪ್ ಹೌಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಕಳೆದ 4 ವರ್ಷಗಳಿಂದ ಖಜಾಂಚಿ ವಿನ್ಸೆಂಟ್ ಪಾಲನ್ನ, ಕಾನೂನು ಸಲಹೆಗಾರ ಫಾದರ್ ನೋಯಲ್ ಕರ್ಕಡ ದೈಹಿಕ, ಮಾನಸಿಕ, ಲೈಂಗಿಕ ಕಿರುಕುಳ ನೀಡಿದ್ದಾರೆ.

ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯ
ಕಾನೂನು ಸಲಹೆಗಾರ ಫಾದರ್ ನೋಯಲ್ ಕರ್ಕಡ ಎಂಬಾತ ಮಹಿಳೆಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ದೂರಿದ್ದಾರೆ. ಕರುಣಾಕರ ಕುಂದರ, ಮನೋಹರ ಅಮ್ಮನ್ನ, ಸುಜಾತ, ವಿಲಿಯಂ ಕೇರಿ ಎಂವವರು ನನ್ನ ತೇಜೋವಧೆ ಆಗುವ ರೀತಿ ವರ್ತಿಸಿದ್ದಾರೆ ಎಂದು ದೂರಿದ್ದಾರೆ.

ಅಲ್ಲದೇ ಕೆಲಸದಿಂದ ತೆಗೆಯಲು ಯತ್ನಿಸಿರುವ ಬಗ್ಗೆ ಸಂತ್ರಸ್ಥ ಮಹಿಳೆ ಆರೋಪ ಮಾಡಿದ್ದಾರೆ. ಸಂತ್ರಸ್ಥ ಮಹಿಳೆ ಮೈಸೂರಿನ ಒಡನಾಡಿ ಸಂಸ್ಥೆಗೂ ದೂರು ನೀಡಿದ್ದಾರೆ. ಈ ಹಿನ್ನೆಲೆ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಸಂತ್ರಸ್ಥೆಯನ್ನು ಖುದ್ದು ಭೇಟಿಯಾಗಿದ್ದಾರೆ. ಸದ್ಯ ಸ್ಟ್ಯಾನ್ಲಿ ಸಂತ್ರಸ್ಥ ಮಹಿಳೆಯ ಬೆಂಬಲಕ್ಕೆ ನಿಂತಿದ್ದಾರೆ. ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಐಪಿಸಿ 1860(U/s-354(A), 354(D), 506, 34, 504, 354 ಕಲಂ ಅಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ಸತ್ಯಾಸತ್ಯತೆ ತಿಳಿಯಲು ತನಿಖೆ ನಡೆಸಿದ್ದಾರೆ.

- Advertisement -

Related news

error: Content is protected !!