Thursday, May 2, 2024
spot_imgspot_img
spot_imgspot_img

ಮಂಗಳೂರು: ಬೆಳ್ಳಂಬೆಳಗ್ಗೆ ನಿಷೇಧಿತ PFI ಮುಖಂಡರ ಮನೆ ಮೇಲೆ ಪೊಲೀಸರಿಂದ ದಾಳಿ; ಐವರು ವಶಕ್ಕೆ..!

- Advertisement -G L Acharya panikkar
- Advertisement -

ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ SDPI, ನಿಷೇಧಿತ PFI ಕಾರ್ಯಕರ್ತರ ಮನೆಗಳ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದ ಘಟನೆ ಅ 13 ರಂದು ಬೆಳ್ಳಂಬೆಳಿಗ್ಗೆ ನಡೆದಿದೆ. ಪಣಂಬೂರು, ಸುರತ್ಕಲ್, ಮಂಗಳೂರು ಗ್ರಾಮಾಂತರ, ಉಳ್ಳಾಲ ಸೇರಿ ಏಳೆಂಟು ಕಡೆ ಮಂಗಳೂರು ಪೊಲೀಸರು ದಾಳಿ ನಡೆಸಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ N.ಶಶಿಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ವೇಳೆ ಮನೆಗಳನ್ನು ಸಂಪೂರ್ಣವಾಗಿ ಜಾಲಾಡಿರುವ ಪೊಲೀಸರು ದಾಖಲೆ ಹಾಗೂ ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಇದರ ಅಧಾರದಲ್ಲಿ ಐವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಈ ದಾಳಿ ಈ ಹಿಂದೆ ನಡೆದ ಕೃತ್ಯದ ತನಿಖೆಯ ಭಾಗವಾಗಿ ನಡೆದಿದೆಯೇ ಅಥಾವ ದುಷ್ಕೃತ್ಯ ನಡೆಸುವ ಮುನ್ಸೂಚನೆ ಸಿಕ್ಕ ಹಿನ್ನಲೆಯಲ್ಲಿ ಈ ದಾಳಿಯನ್ನು ನಡೆಸಲಾಗಿದೆಯೇ ಎಂದು ಖಚಿತಗೊಂಡಿಲ್ಲ. ಕೆಲ ವಾರಗಳ ಹಿಂದೆ ರಾಷ್ಟ್ರೀಯ ತನಿಖಾದಳ ಹಾಗೂ ಕರ್ನಾಟಕ ಪೊಲೀಸರು SDPI ಪಕ್ಷ ಹಾಗೂ PFI ಸಂಘಟನೆಯ ಹಲವು ನಾಯಕರುಗಳ ಮನೆ ಮೇಲೆ ದಾಳಿ ನಡೆಸಿದ್ದರು. ಅದಾದ ಬಳಿಕ PFI ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು 5 ವರ್ಷಗಳ ಕಾಲ ಬ್ಯಾನ್ ಮಾಡಲಾಗಿದೆ.

ಇಂದಿನ ಪೊಲೀಸರ ಕಾರ್ಯಚರಣೆ ಯು ಈಹಿಂದಿನ ದಾಳಿಯ ವೇಳೆ ಸಿಕ್ಕ ಸುಳಿವುಗಳ ಅಧಾರದ ಮೇಲೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಈಕಾರ್ಯಚರಣೆಯ ಬಗೆಗಿನ ಯಾವುದೇ ಅಧಿಕೃತ ಮಾಹಿತಿ ಪೊಲೀಸ್ ಇಲಾಖೆಯ ವತಿಯಿಂದ ಬಂದಿಲ್ಲ. ಆದರೆ ವಶಕ್ಕೆ ಪಡೆದ ಪಿಎಫ್‌ಐ ಮುಂಡರ ವಿರುದ್ಧ UAPA Act, sec121 ಹಾಗೂ ವಿವಿಧ ಸೆಕ್ಷನ್ಗಳಡಿ ಕೇಸ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!