- Advertisement -
- Advertisement -

ಮಂಗಳೂರು: ತಾಯಿಯ ಮನೆಯನ್ನು ಮಗನೇ ನೆಲಸಮ ಮಾಡಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುನೀತಾ ಜನಾರ್ದನ್(75) ಎಂಬವರು ತನ್ನ ಪುತ್ರ ದೀಪಕ್ ಸನೀಲ್‌ರೊಂದಿಗೆ ಮಣ್ಣಗುಡ್ಡದ ವಿಕೆ ಜನಾರ್ದನ ಕಾಂಪೌಂಡ್‌ನ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಅ.16ರಂದು ತನ್ನ ಮನೆಯಲ್ಲಿ ಅಡುಗೆ ಕೋಣೆ ಮತ್ತು ಟಾಯ್ಲೆಟ್ ದುರಸ್ತಿ ನಡೆಯುತ್ತಿದ್ದ ಕಾರಣ ಸುನೀತಾ ಮತ್ತಾಕೆಯ ಪುತ್ರ ದೀಪಕ್ ಅವರು ಪುತ್ರಿ ಸರಿತಾರ ಮನೆಗೆ ಮಲಗಲು ತೆರಳಿದ್ದರು.
ರಾತ್ರಿ ವೇಳೆ ಇನ್ನೋರ್ವ ಪುತ್ರ ಸುದೇಶ್ ಸನೀಲ್ ಎಂಬಾತ ಜೆಸಿಬಿ ಮತ್ತು ಇಬ್ಬರನ್ನು ಕರೆ ತಂದು ತನ್ನ ಮನೆಯನ್ನು ನೆಲಸಮ ಮಾಡಿ ಮನೆಯ ಕಪಾಟಿನಲ್ಲಿದ್ದ 27,000 ರೂ. ನಗದು, 24 ಗ್ರಾಂ ತೂಕದ 2 ಚಿನ್ನದ ಬಳೆ, 8 ಗ್ರಾಂ ತೂಕದ ಚಿನ್ನದ ಚೈನ್‌ನ್ನು ಕಳವು ಮಾಡಿ ಮನೆಯ ಸಾಮಗ್ರಿಗಳನ್ನು ಹಾಳು ಮಾಡಿಸಿದ್ದಾನೆ. ಅಲ್ಲದೆ 2 ದಿನಗಳ ಮೊದಲು ಸುನೀತಾ ಮತ್ತು ದೀಪಕ್‌ರಿಗೆ ಸುದೇಶ್ ಜೀವಬೆದರಿಕೆ ಹಾಕಿದ್ದಾನೆ ಎಂಬುದಾಗಿ ಬರ್ಕೆ ಠಾಣೆಗೆ ದೂರು ನೀಡಲಾಗಿದೆ.

- Advertisement -