Sunday, June 14, 2026
spot_imgspot_img
spot_imgspot_img

ಮದುವೆ ಮುಗಿಸಿ ಬರುತ್ತಿದ್ದ ಕಾರು ಮರಕ್ಕೆ ಡಿಕ್ಕಿ : 6 ಮಂದಿ ಸಾವು

- Advertisement -
- Advertisement -

ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಸಮೀಪ ನಡೆದಿದೆ.

ಮಹರಾಷ್ಟ್ರ ಪಾಸಿಂಗ್ ಇರುವ ಸ್ವಿಫ್ಟ್ ಕಾರು ಮದುವೆ ಮುಗಿಸಿ ಮರಳುತ್ತಿದ್ದ ವೇಳೆ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಒಂದೇ ಕಾರಿನಲ್ಲಿ ಒಂಬತ್ತು ಜನ ಪ್ರಯಾಣಿಸುತ್ತಿದ್ದರೆಂಬ ಮಾಹಿತಿ ಲಭಿಸಿದೆ. ಮೃತರನ್ನು ಧಾರವಾಡದವರಾದ ಕಾರ್‌ ಚಾಲಕ ಶಾರೂಖ್‌ ಪೆಂಡಾರಿ (30), ಇಕ್ಬಾಲ್‌ ಜಮಾದಾರ (50), ಹಾವೇರಿಯವರಾದ ಸಾನಿಯಾ ಲಂಗೋಟಿ (37), ಉಮ್ರಾ ಬೇಗಮ್‌ ಲಂಗೋಟಿ (17), ಶಬನಮ್‌ ಲಂಗೋಟಿ (37), ಫರಾನ್‌ ಲಂಗೋಟಿ (13) ಎಂದು ಗುರುತಿಸಲಾಗಿದೆ. ಧಾರವಾಡದ ಫರ್ಹಾತ್‌ ಬೆಟಗೇರಿ (18), ಸಾನಿಯಾ ಇಕ್ಬಾಲ್‌ ಜಮಾದಾರ (36), ಹಾವೇರಿಯ ಸೋಫಿಯಾ ಲಂಗೋಟಿ (22) ಹಾಗೂ ಮಹಿನ್‌ ಲಂಗೋಟಿ (7) ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!