Friday, April 19, 2024
spot_imgspot_img
spot_imgspot_img

ಮಂಗಳೂರು: ಮನೆಯವರೆಲ್ಲ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಚಿನ್ನ ಹಾಗೂ ನಗದು ದೋಚಿ ಪರಾರಿಯಾದ ಖದೀಮರು

- Advertisement -G L Acharya panikkar
- Advertisement -

ಮಂಗಳೂರು: ಮನೆಯವರು ದೇವಸ್ಥಾನಕ್ಕೆ ತೆರಳಿದ್ದಾಗ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ಉಳ್ಳಾಲ ಬೈಲಿನ ಬಂಗೇರ ಲೇನ್ ಎಂಬಲ್ಲಿ ನಡೆದಿದೆ.

ಉದ್ಯಮಿ ಶಿವ. ಕೆ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲಿನ ಚಿಲಕ ಒಡೆದು ಒಳ ನುಗ್ಗಿದ ಕಳ್ಳರು 210 ಗ್ರಾಂ ಚಿನ್ನ ಮತ್ತು 37,000 ರೂನಗದು ದೋಚಿದ್ದಾರೆ ಎಂದು ತಿಳಿದುಬಂದಿದೆ.

ಶಿವ ಅವರು ಕುಟುಂಬ ಸಮೇತರಾಗಿ ಕೇರಳದ ಚೋಟನಿಕೆರೆ ಭಗವತೀ ಕ್ಷೇತ್ರಕ್ಕೆ ಹರಕೆ ತೀರಿಸಲೆಂದು ತೆರಳಿದ್ದರು. ಇಂದು ಬೆಳಗ್ಗೆ ಕುಟುಂಬ ವಾಪಸ್ಸಾಗಿ ಮನೆಯೊಳಗೆ ಹೋದಾಗ ಕಳ್ಳತನ ನಡೆದ ಪ್ರಕರಣ ಬೆಳಕಿಗೆ ಬಂದಿದೆ.

ಎಸಿಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ಶ್ವಾನ ದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!