ಅನೀಶ್ ಮತ್ತು ದ. ಕ. ಜಿಲ್ಲೆಯ SDPI ಮಾಜಿ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್ ವಿರುದ್ದ ಪ್ರಕರಣ ದಾಖಲು



ಕಡಬ: ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಇಬ್ಬರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟ್ರುಪ್ಪಾಡಿ ಗ್ರಾಮದ ಕಲ್ಲೋಳಿಕಲ್ ಮನೆ ನಿವಾಸಿ ಕೆ.ಎಂ. ಮ್ಯಾಥ್ಯೂ ಅವರು ನೀಡಿದ ದೂರಿನಂತೆ, ನ.12 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕೋಡಿಂಬಾಳದ ಅನೀಶ್ ಎಂಬವರು ಮೊಬೈಲ್(8088033083) ಮೂಲಕ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿ ಕಡಬ ಪೇಟೆಗೆ ಬರುವಂತೆ ಹೇಳಿದ್ದಾರೆ.
ಬಳಿಕ ಮ್ಯಾಥ್ಯೂ ಅವರು ಮಗ ರಕ್ಷಿತ್ ಮಾಣಿ ಜೊತೆ ಕಡಬದ ಗಣೇಶ್ ಮೆಡಿಕಲ್ ಬಳಿ ಬಂದಾಗ, ಕೆಎ 21 ಎನ್ 2192 ನಂಬರಿನ ಮಾರುತಿ ಸ್ವಿಫ್ಟ್ ಕಾರಿನಲ್ಲಿ ವಿಕ್ಟರ್ ಮಾರ್ಟಿಸ್ ಜೊತೆ ಬಂದ ಆರೋಪಿ ಅನೀಶ್, ಹಲ್ಲೆಹಲ್ಲೆಗೆ ಮುಂದಾಗಿ ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ತೆರಳಿದ್ದಾರೆ ಎಂದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ದೂರುದಾರರ ಕಾರಿನ ಸಿಸಿ ಕ್ಯಾಮರಾ ಹಾಗೂ ಹತ್ತಿರದ ಅಂಗಡಿಯ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 136/2026, ಕಲಂ 126(2), 308(5) r/w 3(5) BNS-2023 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.








