Sunday, May 12, 2024
spot_imgspot_img
spot_imgspot_img

ಮಂಗಳೂರು: ಮಳಲಿ ಮಸೀದಿಯ ಜಾಗದಲ್ಲಿ ಹಿಂದೂ ದೇವಾಲಯ ಇರುವುದರಲ್ಲಿ ಅನುಮಾನವಿಲ್ಲ; ತಾಂಬೂಲ ಪ್ರಶ್ನೆಯಲ್ಲಿ ಬಯಲಾಯ್ತು ಮಸೀದಿಯೊಳಗಿನ ರಹಸ್ಯ

- Advertisement -G L Acharya panikkar
- Advertisement -

ಮಂಗಳೂರು: ಕರಾವಳಿಯಲ್ಲಿ ಭಾರೀ ಕುತೂಹಲ ವಿವಾದಕ್ಕೆ ಕಾರಣವಾಗಿದ್ದ ಮಳಲಿ ಮಸೀದಿಯಲ್ಲಿ ಪತ್ತೆಯಾದ ದೇವಸ್ಥಾನ ಪ್ರಕರಣಕ್ಕೆ ಸಂಬಂಧಿಸಿ ಇಂದು ತಾಂಬೂಲ ಪ್ರಶ್ನೆ ನಡೆಯಿತು. ಗುರುಪುರ ಬಳಿಯ ಮಳಲಿ ಜುಮ್ಮಾ ಮಸೀದಿಯನ್ನು ಮರುನಿರ್ಮಾಣಕ್ಕೆ ತೆಗೆಯುವ ವೇಳೆ ದೇವಸ್ಥಾನದ ಕುರುಹು ಕಂಡು ಬಂದಿತ್ತು. ಈ ಬಗ್ಗೆ ಹಿಂದೂ ಸಂಘಟನೆಗಳು ತಾಂಬೂಲ ಪ್ರಶ್ನೆ ನಡೆಸಿ ನಿಜಾಂಶವನ್ನು ಬಯಲು ಮಾಡಲು ಪಣ ತೊಟ್ಟಿತ್ತು.

ಹಿಂದಿನ ಕಾಲದಲ್ಲಿ ದೇವಸ್ಥಾನ ಆಗಿತ್ತೇ ಎನ್ನುವ ಬಗ್ಗೆ ಹಿಂದು ಸಂಘಟನೆಗಳು ತಾಂಬೂಲ ಪ್ರಶ್ನೆ ನಡೆಸುತ್ತಿದ್ದು, ಸ್ಥಳೀಯ ಉಳಿಪ್ಪಾಡಿ ಗುತ್ತಿನ ಉದಯ ಕುಮಾರ್ ಶೆಟ್ಟಿ ತಾಂಬೂಲ ಪ್ರಶ್ನೆಯ ಯಜಮಾನಿಕೆ ವಹಿಸಿಕೊಂಡಿದ್ದರು. ಜ್ಯೋತಿಷಿಗಳಿಗೆ 9 ವೀಳ್ಯದೆಲೆಗಳನ್ನು ನೀಡಿ ತಾಂಬೂಲ ಪ್ರಶ್ನೆ ಕೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜ್ಯೋತಿಷಿ, ಈ ತಾಂಬೂಲಕ್ಕೆ ಗುರುಬಲ ಇದೆ. ಮೂರು ಆರೂಢದಲ್ಲಿ ಗುರುಬಲ ಇಲ್ಲ. ಸದ್ರಿ ಜಾಗ ಮೇಲ್ನೋಟಕ್ಕೆ ದೇವಸ್ಥಾನ ಇದ್ದ ಭೂಮಿ ಎನ್ನುವುದು ತಿಳಿದುಬರುತ್ತಿದೆ. ಯಾವ ದೇವ ಸಾನ್ನಿಧ್ಯ ಎಂದು ತಿಳಿಯಬೇಕಿದೆ ಎಂದು ಕವಡೆ ಕಾಯಿ ಉರುಳಿಸಿದರು.

ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದ ಸತ್ಯ..!

ಸಾಮಾನ್ಯ ತಾಂಬೂಲ ಪ್ರಶ್ನೆ ಮೂಲಕ ಯಾವ ದೈವ ಸಾನ್ನಿಧ್ಯ ಅಂತ ತಿಳಿಯಲು ಸಾಧ್ಯವಿಲ್ಲ. ಇಲ್ಲಿ ದೇವಸ್ಥಾನ ಇತ್ತೇ ಅಥವಾ ದೈವಸ್ಥಾನ ಇತ್ತೇ ಎನ್ನುವ ಬಗ್ಗೆ ಮುಂದೆ ಚಿಂತನೆ ನಡೆಸಬೇಕಿದೆ. ಈ ಜಾಗದಲ್ಲಿ ಹಿಂದೆ ಮಠ, ಆರಾಧನೆ ಇದ್ದಿರುವ ಬಗ್ಗೆ ಕಂಡುಬರುತ್ತಿದೆ. ಅದು ದೈವಸಾನ್ನಿಧ್ಯ ಇದ್ದ ಭೂಮಿ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಸಾನ್ನಿಧ್ಯ ಸಂಪೂರ್ಣವಾಗಿ ನಾಶ ಆಗಿಲ್ಲ, ಪೂರ್ವ ಕಾಲದಲ್ಲಿ ಮಠದ ರೀತಿಯ ಪ್ರದೇಶ ಆಗಿತ್ತು. ಮಠ ನಾಶ ಆಗಲು ಜೀವ ಹಾನಿಯಾಗಿರೋದು ಕಾರಣವಾಗಿರಬಹುದು.

ದೋಷಗಳಿಗೆ ಮೊದಲು ಪರಿಹಾರ ಕಂಡುಕೊಳ್ಳಬೇಕಿದೆ. ಯಾವುದೋ ಒಂದು ಕಾಲದಲ್ಲಿ ನಾಶವಾದ ಭೂಮಿಗೆ ಈಗ ಅಭಿವೃದ್ಧಿಯಾಗುವ ಸಮಯ ಬಂದಿದೆ. ಯಾವುದೋ ವಿವಾದದಿಂದ ಭೂಮಿ ನಾಶವಾಗಿದೆ. ಸ್ಥಳ ಸಾನ್ನಿಧ್ಯದ ವಿವಾದದ ಸಂದರ್ಭದಲ್ಲಿ ಕೆಲ ಶಕ್ತಿಗಳು ಬಿಟ್ಟು ಹೋಗಿದ್ದರೂ, ಸದ್ರಿ ಜಾಗದಲ್ಲಿ ಇನ್ನೂ ಶಕ್ತಿಗಳು ನೆಲೆಸಿವೆ. ಅಲ್ಲಿ ಅಭಿವೃದ್ಧಿ ಆಗದಿದ್ದರೆ ಊರಿಗೇ ಸಮಸ್ಯೆಗಳು ಬರುತ್ತದೆ. ಎಲ್ಲರೂ ಒಗ್ಗಟ್ಟಾಗಿ ಮುಂದುವರಿಸಬೇಕಿದೆ ಎಂದು ಜ್ಯೋತಿಷ್ಯ ಚಿಂತನೆಯಲ್ಲಿ ಪಣಿಕ್ಕರ್ ಹೇಳಿದರು.

ಲಿಂಗಾಯತ ಮಠಕ್ಕೆ ಸೇರಿದ ಜಾಗ ?

ಇದೇ ಸಾನಿಧ್ಯಕ್ಕೆ ಸಂಬಂಧಪಟ್ಟ ಇನ್ನೊಂದು ಜಾಗ ಎತ್ತರದ ಪ್ರದೇಶದಲ್ಲಿ ಇದೆ. ಅಲ್ಲಿ ಹುಡುಕಿದರೆ ಸಾಕಷ್ಟು ಅವಶೇಷಗಳು ಸಿಗುವ ಸಾಧ್ಯತೆ ಇದೆ. ಹಿಂದೆ ಇದ್ದ ಕ್ಷೇತ್ರದ ಪೂರ್ಣ ಚೈತನ್ಯ ಅಲ್ಲಿಯೇ ಉಳಿದುಕೊಂಡಿದೆ. ಇದು ಹತ್ತಕ್ಕೂ ಅಧಿಕ ದೈವ- ದೇವರ ಸಮೂಹ ಆರಾಧನೆ ನಡೆಯುತ್ತಿದ್ದ ಜಾಗವಾಗಿತ್ತು. ಇದು ಒಂದು ಮಠಕ್ಕೆ ಸಂಬಂಧಿಸಿದ ಕ್ಷೇತ್ರವಾಗಿತ್ತು. ಯಾವುದೋ ಒಂದು ಕಾಲದಲ್ಲಿ ನಾಶವಾಗಿ ಇರಬಹುದು. ಆದರೆ ಈಗ ಅದರ ಪುನಶ್ವೇತನಕ್ಕೆ ಕಾಲ ಕೂಡಿಬಂದಿದೆ. ಇದು ಲಿಂಗಾಯತ ಮಠಕ್ಕೆ ಸೇರಿರುವ ಜಾಗವಾಗಿರುವ ಸಾಧ್ಯತೆಯಿದೆ ಎಂದು ಗೋಪಾಲಕೃಷ್ಣ ಪಣಿಕ್ಕರ್ ಹೇಳಿದರು. ಗುರುಪುರ ಬಳಿ ಈಗಾಗಲೇ ಜಂಗಮ ಮಠವಿದ್ದು ಅದಕ್ಕೆ ಸೇರಿದ ಜಾಗ ಎನ್ನುವ ಅಂಶ ಜ್ಯೋತಿಷ್ಯ ಚಿಂತನೆಯಲ್ಲಿ ತಿಳಿದುಬಂದಿದೆ.

- Advertisement -

Related news

error: Content is protected !!