Sunday, June 29, 2025
spot_imgspot_img
spot_imgspot_img

ಮಂಗಳೂರು: ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದ ರೌಡಿ ಶೀಟರ್ ಖಲೀಲ್; ಪ್ರಶ್ನಿಸಿದ ಮಗನಿಗೆ ತಲವಾರು ದಾಳಿ.!

- Advertisement -
- Advertisement -

ಮಂಗಳೂರು: ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ಪ್ರಶ್ನಿಸಿದ ಯುವಕನ ಮೇಲೆ ನೀರು ಸರಬರಾಜು ಟ್ಯಾಂಕರ್ ಚಾಲಕನೊಬ್ಬ ತಲವಾರಿನಿಂದ ಹಲ್ಲೆ ನಡೆಸಿರುವ ಘಟನೆ ನಗರದ ಹೊರವಲಯದ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಎಂಬಲ್ಲಿ ನಡೆದಿದೆ.

ಚೆಂಬುಗುಡ್ಡೆ ನಿವಾಸಿ ರಿಝ್ವಾನ್ ತಲವಾರು ದಾಳಿಯಿಂದ ಗಾಯಗೊಂಡಿದ್ದು, ಉಳ್ಳಾಲ ಬಸ್ತಿಪಡ್ಪು ನಿವಾಸಿ ಖಲೀಲ್ ತಲವಾರಿನಿಂದ ದಾಳಿ ನಡೆಸಿದ ಆರೋಪಿ.

ರೌಡಿ ಶೀಟರ್ ಖಲೀಲ್

ಉಳ್ಳಾಲ ನಗರಸಭೆಯಿಂದ ನೀರಿನ ಗುತ್ತಿಗೆ ಪಡೆದಿದ್ದ ಟ್ಯಾಂಕರ್ ನಲ್ಲಿ ತೊಕ್ಕೊಟ್ಟು ಚೆಂಬುಗುಡ್ಡೆ ಬಳಿ ನೀರು ಸರಬರಾಜು ಮಾಡುತ್ತಿದ್ದಾಗ ಖಲೀಲ್ ಮಹಿಳೆಯೊಬ್ಬರಿಗೆ ಅವ್ಯಾಚ ಶಬ್ದದಿಂದ ಬೈದಿದ್ದು, ಈ ವಿಚಾರದಲ್ಲಿ ಮಹಿಳೆಯ ಪುತ್ರ ಚೆಂಬುಗುಡ್ಡೆ ನಿವಾಸಿ ರಿಝ್ವಾನ್ ಉಳ್ಳಾಲದ ನೀರು ತುಂಬಿಸುವ ಬಾವಿ ಬಳಿ ತೆರಳಿದ್ದು ಮಾತಿನ ಚಕಮಕಿ ನಡೆದು ಖಲೀಲ್ ರಿಝ್ವಾನ್ ಮೇಲೆ ತಲವಾರಿನಿಂದ ದಾಳಿ‌ ನಡೆಸಿದ್ದಾನೆ.

ಇನ್ನು ಗಾಯಗೊಂಡಿದ್ದ ರಿಝ್ವಾನ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾನೆ. ಖಲೀಲ್ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!