Saturday, April 20, 2024
spot_imgspot_img
spot_imgspot_img

ಮಂಗಳೂರು ಮುಸ್ಲಿಂ ಯುವಕನನ್ನು ವರಿಸಿದ ನೆದರ್‌ಲ್ಯಾಂಡ್‌ ಕನ್ಯೆ..!!

- Advertisement -G L Acharya panikkar
- Advertisement -
vtv vitla

ಮಂಗಳೂರು: ಪ್ರೀತಿ ಎಂಬ ಮಾಯೆಗೆ ಅಂತರವಿಲ್ಲ, ಭಾಷೆ ಬೇಕಿಲ್ಲ ಪ್ರೀತಿಸುವ ಮನಸ್ಸುಗಳಿದ್ದರೆ ಸಾಕು, ಇದಕ್ಕೆ ನೆದರ್ಲೆಂಡ್ ಯುವತಿ ಮಂಗಳೂರಿನ ಯುವಕ ಪರಸ್ಪರ ಪ್ರೀತಿಸಿ ಮದುವೆಯಾಗಿರುವ ಘಟನೆ ಸಾಕ್ಷಿಯಾಗಿದೆ.

ಮೂಲತಃ ಮಂಗಳೂರಿನ ಯುವಕ ನೆದರ್‌ಲ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಪ್ರೀತಿಯಾಗಿದ್ದು, ಇಬ್ಬರೂ ಪರಸ್ಪರ ಒಪ್ಪಿಕೊಂಡು ಮದುವೆಯಾಗಿದ್ದಾರೆ.

ನೆದರ್‌ಲ್ಯಾಂಡ್ ಯುವತಿ ಮುಸ್ಲಿಂ ಸಂಪ್ರದಾಯದಂತೆಯೇ ಇಲ್ಲಿನ ಸುರತ್ಕಲ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಯುವತಿ ಕುಟುಂಬಸ್ಥರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಈ ಸಂಭ್ರಮದ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಮದುವೆ ಬಳಿಕ ಭಾಷೆ ತಿಳಿಯದ ಹುಡುಗನ ಹಿರಿಯಜ್ಜಿ ವಿದೇಶಿಗರ ಜೊತೆ ಮಾತನಾಡಲು ಪ್ರಯತ್ನಿಸಿದ್ದಾರೆ, ಈ ತಮಾಷೆಯ ವೀಡಿಯೋ ತುಣುಕು ನೆಟ್ಟಿಗರಲ್ಲಿ ಹಾಸ್ಯ ತರಿಸಿದೆ. ಕಳೆದ ವರ್ಷ ಬೆಲ್ಜಿಯಂ ಕನ್ಯೆಯೊಬ್ಬಳು, ಹಂಪಿಯ ಆಟೋ ಚಾಲಕ ಯುವಕನನ್ನ ಪ್ರೀತಿಸಿ ಮದುವೆ ಆಗಿದ್ದರು. ಈ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡಿತ್ತು.

- Advertisement -

Related news

error: Content is protected !!