Saturday, July 25, 2026
spot_imgspot_img
spot_imgspot_img

ಮಂಗಳೂರು: ಮೂರು ಮಕ್ಕಳಿದ್ದರೂ ಅನೇಕ ಮಹಿಳೆಯರೊಂದಿಗೆ ಅನೈತಿಕ ಸಂಬಂಧ; ಹಣ ಸಾಲದ್ದಕ್ಕೆ ವರದಕ್ಷಿಣೆ ತರಲು ಕಿರುಕುಳ

- Advertisement -
- Advertisement -
vtv vitla
vtv vitla
suvarna gold

ಮಂಗಳೂರು: ಪತ್ನಿಯ ಚಿನ್ನಾಭರಣ ಅಡವಿಟ್ಟು ಬಸ್ ಖರೀದಿಸಿ ಬಳಿಕ ಬಡ್ಡಿ ಕಟ್ಟಲು ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.

ಸುರತ್ಕಲ್ ಕೃಷ್ಣಾಪುರ ಕಾಟಿಪಳ್ಳ 9ನೇ ಬ್ಲಾಕ್ ನ ಅಶೀನಾ ಎಂಬಾಕೆಗೆ ಅಬ್ದುಲ್ ಖಾದರ್ ಇಸ್ಮಾಯಿಲ್ (ಮಾಲೀಕ ಅಶೀಲ್ ಟ್ರಾವೆಲ್ಸ್ ) ಮಾವ ಟಿ ಎ ಮುಹಮ್ಮದ್ ಮತ್ತು ಅತ್ತೆ ಖತೀಜಾ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla

ಅಬ್ದುಲ್ ಖಾದರ್ ಇಸ್ಮಾಯಿಲ್ ಜೊತೆ ಅಶ್ರೀನಾ 7ವರ್ಷಗಳ ಹಿಂದೆ ಮದುವೆಯಾಗಿದ್ದು, ಮೂವರು ಹೆಣ್ಣುಮಕ್ಕಳು ಇದ್ದಾರೆ. ಮದುವೆಯ ಸಂದರ್ಭ 50 ಪವನ್ ಚಿನ್ನಭಾರಣವನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು, ಬಸ್ಸು ತೆಗೆಯಲೆಂದು ಅದನ್ನು ಪತಿ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದಿದ್ದರು. ನಂತರ ಬ್ಯಾಂಕಿನ ಸಾಲದ ಬಡ್ಡಿ ಕಟ್ಟಲು ಹಣ ಇಲ್ಲವೆಂದು ಪತ್ನಿಯಲ್ಲಿ ಹಣ ತಂದು ಕೊಡುವಂತೆ ಪೀಡಿಸುತ್ತಿದ್ದನು. ಈ ಬಗ್ಗೆ ಹಲವು ಬಾರಿ ತನ್ನಅಣ್ಣನಿಂದ ಹಣ ತೆಗೆದುಕೊಟ್ಟಿದ್ದೇನೆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ ಬಾರಿಯು ಬಡ್ಡಿ ಕಟ್ಟಲು ಹಣ ಇಲ್ಲಾ ಎಂದಾಗ ಮಾವ ಜಮಾಲ್ ಎಂಬವರಿಂದ ಸಾಲ ಪಡೆದು 2.60ಲಕ್ಷ ರೂ. ಮೂಲಕ ಬಡ್ಡಿ ಹಣವನ್ನು ಸಂದಾಯ ಮಾಡಿದ್ದೇನೆ. ಮದುವೆ ಆದ 4 ವರ್ಷದಿಂದಲೇ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. 7, 8 ಬಾರಿ ನನ್ನ ಮನೆಯವರ ಕಡೆಯಿಂದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಗೆ ಕೂಡ ಆಗಿದೆ. ಇಷ್ಟೆಲ್ಲಾ ಆದ್ರೂ ಕೂಡ ಪತಿ ತನ್ನ ನೀಚ ಬುದ್ಧಿಯನ್ನು ಬಿಟ್ಟಿರಲಿಲ್ಲ.

ಇದು ಮಾತ್ರವಲ್ಲದೆ ಪತಿಯು ತನ್ನ ಬಸ್ಸಿನಲ್ಲಿ ಬರುವ ಹೆಣ್ಣುಮಕ್ಕಳ ಜೊತೆ ಹಾಗೂ ಬೇರೆ ಹೆಣ್ಣುಮಕ್ಕಳ ಜೊತೆ ಫೋನ್ ಮೂಲಕ ಮಾತನಾಡುವುದು ಮತ್ತು ವಾಟ್ಸಪ್ ಮೂಲಕ ಮೆಸೇಜ್ ಮಾಡುತ್ತಿರುವುದು ಕೂಡ ಇತ್ತು. ಅಲ್ಲದೆ ಬೇರೆ ಹೆಣ್ಣುಮಕ್ಕಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಲ್ಲದೇ ತನ್ನ ಬಸ್ಸಿನಲ್ಲಿ ಸಂಪಾದಿಸಿದನ್ನೆಲ್ಲ ಅವರಿಗೆ ಖರ್ಚುಮಾಡುತಿದ್ದರು ಇದನ್ನು ಪ್ರಶ್ನಿಸಿದರೆ ಮಕ್ಕಳ ಮುಂದೆಯೇ ಚಿತ್ರಹಿಂಸೆ ನೀಡುತ್ತಿದ್ದಾನೆಂದು ಮಹಿಳೆ ಆರೋಪಿಸಿದ್ದಾರೆ.

vtv vitla
vtv vitla

ಇದಕ್ಕೂ ಮೊದಲು ಮಹಿಳೆ ದೈಹಿಕವಾಗಿ ಹಲ್ಲೆ ನಡೆಸಿ, ಮನೆಯವರಿಗೆ ಫೋನ್ ಮಾಡಿ ಹಣ ಕೇಳು. ಎಂದು ಒತ್ತಾಯಿಸುತ್ತಿದ್ದರು. ಮಹಿಳೆ ಫೋನ್ ಮಾಡಿಲ್ಲ ಎಂಬ ಕಾರಣಕ್ಕೆ ಸಿಟ್ಟಿನಿಂದ ಹಲ್ಲೆ ಮಾಡಿ, ಮೊಬೈಲ್ ಫೋನನ್ನು ಒಡೆದು ಹಾಕಿದ್ದಾರೆ. ಈ ಬಗ್ಗೆ ಪತ್ನಿ ಮಹಿಳಾ ಸಮಾಜ ಮತ್ತು ಪಾಂಡೇಶ್ವರ ಮಹಿಳಾ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಟ್ಟಿದ್ದರು ಆದರೆ ಅಲ್ಲೂ ಕೂಡ ನನಗೆ ನ್ಯಾಯ ಸಿಗಲಿಲ್ಲ.

ಇಷ್ಟೆಲ್ಲಾ ಆಗಿಯೂ ಜ.4. ರಂದು ಸಂಜೆ 5ಕ್ಕೆ ಮಾವ ಮತ್ತು ಅತ್ತೆಯ ಸಮ್ಮುಖದಲ್ಲಿ ಮಾನಸಿಕ ಹಿಂಸೆ ನೀಡಿ ಮತ್ತಷ್ಟು ಹಣ ತಂದು ಕೊಡುವಂತೆ ಒತ್ತಾಯಿಸಿ ಮನಬಂದಂತೆ ಹಲ್ಲೆ ನಡೆಸಿ ಮಹಿಳೆಯ ಬಟ್ಟೆಗಳನ್ನೆಲ್ಲ ಹರಿದು ಹಾಕಿ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಜ.7ರಂದು. ಪತಿ, ಮಾವ, ಅತ್ತೆ ಈ ಮೂವರ ಮೇಲೆ FIR ಕೂಡ ಆಗಿದ್ದು, ಮೂವರು ಕೂಡ ತಲೆಮರೆಸಿಕೊಂಡಿದ್ದಾರೆ. ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!