Saturday, May 4, 2024
spot_imgspot_img
spot_imgspot_img

ಮಂಗಳೂರು ಮೂಲದ ಯುವತಿ ಥಾಯ್ಲೆಂಡ್‌ನಲ್ಲಿ ಮೃತ್ಯು

- Advertisement -G L Acharya panikkar
- Advertisement -

ಮಂಗಳೂರು: ಥಾಯ್ಲೆಂಡ್‌ನಲ್ಲಿ ಸ್ಕೂಬಾ ಡೈವಿಂಗ್ ಮಾಡುವ ವೇಳೆ ಮಂಗಳೂರು ಮೂಲದ ಯುವತಿಯೊಬ್ಬರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ನಗರದ ಗೋರಿಗುಡ್ಡೆ ಹಿಲ್ ಸ್ಟೀಕ್ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ವಾಸವಾಗಿದ್ದ ಓಷಿನ್ ಪಿರೇರಾ ಮೃತಪಟ್ಟ ಯುವತಿ ಎಂದು ತಿಳಿದುಬಂದಿದೆ.

ಒಲಿವಿಯಾ ಪಿರೇರ – ದಿ. ಆಸ್ಕರ್ ಮಾರ್ಟಿನ್ ಪಿರೇರಾ ದಂಪತಿಯ ಪುತ್ರಿಯಾಗಿರುವ ಈಕೆ ನಗರದ ಸಂತ ಆಗ್ನೆಸ್ ಕಾಲೇಜು ಬಳಿಯ ಮಂಗಳೂರು ಬೇಕಿಂಗ್ ಕಂಪನಿ ರೆಸ್ಟೋರೆಂಟ್ ಒಡತಿಯಾಗಿದ್ದರು. ಎರಡು ದಿನಗಳ ಹಿಂದೆಯಷ್ಟೇ ಥಾಯ್ಲೆಂಡ್‌ಗೆ ತೆರಳಿದ್ದರು ಎನ್ನಲಾಗಿದೆ. ಅಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ಈ ದುರಂತ ಸಂಭವಿಸಿದೆ.

- Advertisement -

Related news

error: Content is protected !!