Friday, May 3, 2024
spot_imgspot_img
spot_imgspot_img

ಮಂಗಳೂರು: ಲಂಚಕ್ಕೆ ಕೈಯೊಡ್ಡಿದ ತಹಶೀಲ್ದಾರ್‌ ಪುರಂದರ್‌ ಹೆಗ್ಡೆ ಬಂಧನ

- Advertisement -G L Acharya panikkar
- Advertisement -

ಮಂಗಳೂರು : ಲಂಚದ ಹಣಕ್ಕೆ ಬೇಡಿಕೆ ಒಡ್ಡಿದ್ದ ಆರೋಪದಲ್ಲಿ ಮಂಗಳೂರು ತಹಸೀಲ್ದಾರ್ ಪುರಂದರ್ ಹೆಗ್ಡೆ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಮಂಗಳೂರಿನ ಮಿನಿ ವಿಧಾನ ಸೌಧದಲ್ಲಿರುವ ತಾಲೂಕು ಕಚೇರಿಗೆ ನಿನ್ನೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು, ತಹಸೀಲ್ದಾರ್ ಅವರ ಸಹಾಯಕ ಅಧಿಕಾರಿ ಶಿವಾನಂದ ನಾಟೀಕರ್ ನನ್ನು ಬಂಧಿಸಿದ್ದರು. ಲಂಚ ಸ್ವೀಕರಿಸುವಾಗಲೇ ರೆಡ್‌ಹ್ಯಾಂಡ್ ಆಗಿ ಅಧಿಕಾರಿ ಕಯಗೆ ಸಿಕ್ಕಿಬಿದ್ದಿದ್ದಾರೆ.

ಜಾಗ ಮಾರಾಟಕ್ಕೆ ಸಲುವಾಗಿ ಎನ್‌ಸಿಸಿ ಕೇಳಿದ್ದ ಅರ್ಜಿದಾರನಲ್ಲಿ ಹತ್ತು ಸಾವಿರ ಲಂಚ ಕೇಳಿದ್ದ ಆರೋಪದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಯನ್ನು ಲೋಕಾಯುಕ್ತ ರೆಡ್ ಹ್ಯಾಂಡ್ ಆಗಿ ಬಂಧಿಸಿತ್ತು.

ಆರೋಪಿ ವಿಚಾರಣೆ ವೇಳೆ ತಹಶೀಲ್ದಾರ್‌ ಪರವಾಗಿ ಹಣ ಕೇಳಿದ್ದಾಗಿ ತಿಳಿಸಿದ್ದು ಅದರಂತೆ ತಹಸೀಲ್ದಾರ್ ಪುರಂದರ ಹೆಗ್ಡೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ತಹಸೀಲ್ದಾರ್ ಆರೋಪ ಕಂಡುಬಂದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯೇ ತಹಸೀಲ್ದಾರ್ ಪುರಂದರ ಹೆಗ್ಡೆ ಅವರನ್ನು ಲೋಕಾಯುಕ್ತ ಬಂಧಿಸಿದ್ದು

ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಜೈಲಿಗಟ್ಟಿದೆ, ಲೋಕಾಯುಕ್ತ ಎಸ್ಪಿ ಲಕ್ಷಿಗಣೇಶ್‌, ದಿವೈಎಸ್ಪಿ ಚಲುವರಾಜ್‌ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು, ಇತ್ತೀಚೆಗೆ ಲೋಕಾಯುಕ್ತಕ್ಕೆ ಫುಲ್ ಪವರ್ ಸಿಕ್ಕ ಬಳಿಕ ಮೊದಲ ಬಾರಿಗೆ ಲೋಕಾಯುಕ್ತ ಮಂಗಳೂರಿನಲ್ಲಿ ರೈಡ್ ಮಾಡಿದ್ದು ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದೆ.

- Advertisement -

Related news

error: Content is protected !!