Friday, April 19, 2024
spot_imgspot_img
spot_imgspot_img

ಮಂಗಳೂರು: ವರಾನ್ವೇಷಣೆ ವೆಬ್‌ಸೈಟ್ ನಲ್ಲಿ ಮೋಸದ ಜಾಲ; 2 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

- Advertisement -G L Acharya panikkar
- Advertisement -
vtv vitla

ಮಂಗಳೂರು: ವರಾನ್ವೇಷಣೆ ಮಾಡುತ್ತಿದ್ದ ವ್ಯಕ್ತಿಯು ವೆಬ್‌ಸೈಟ್ ನಂಬಿ 2ಲಕ್ಷ ರೂ. ವರ್ಗಾವಣೆ ಮಾಡಿ ವಂಚನೆಗೊಳಗಾಗಿರುವ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ವ್ಯಕ್ತಿಯೊಬ್ಬರು ತನ್ನ ಮಗಳಿಗೆ ವರ ಹುಡುಕುತ್ತಿದ್ದು ಹೊಸದಿಲ್ಲಿ ವಿಳಾಸದ ‘ಎಫ್ಎಂಬಿಎಲೈಟ್ ಮ್ಯಾರೇಜ್ ಬ್ಯೂರೋ ’ ವೆಬ್‌ಸೈಟ್ ನಲ್ಲಿ ಜಾಹೀರಾತು ಗಮನಿಸಿದ್ದರು. ಆ ವೆಬ್‌ಸೈಟ್ ನವರಿಗೆ ಕರೆ ಮಾಡಿದಾಗ ವೆಬ್‌ಸೈಟ್ ಸದಸ್ಯರಾಗಲು 2ಲಕ್ಷ ರೂ. ಪಾವತಿಸುವಂತೆ ತಿಳಿಸಲಾಗಿತ್ತು . ವೆಬ್‌ಸೈಟ್ ನವರ ಸೂಚನೆಯಂತೆ 2ಲಕ್ಷ ರೂ. ವರ್ಗಾಯಿಸಿದರು. ಆದರೆ ಹಣ ಪಡೆದ ನಂತರ ವೆಬ್‌ಸೈಟ್ ನವರು ಸ್ಪಂದಿಸಿಲ್ಲ . ಇದೇ ರೀತಿ ಹಲವರಿಂದ ಹಣ ಪಡೆದು ವಂಚಿಸಲಾಗಿದೆ ಎಂದು ಮಂಗಳೂರಿನ ಪೂರ್ವ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!