Friday, April 26, 2024
spot_imgspot_img
spot_imgspot_img

ಮಂಗಳೂರು: ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿ ಲಕ್ಷಾಂತರ ರೂ. ಹಣ ಕಳೆದುಕೊಂಡ ಮಹಿಳೆ; ಆರೋಪಿ ಸೆರೆ!

- Advertisement -G L Acharya panikkar
- Advertisement -

ಮಂಗಳೂರು: ಮಹಿಳೆಯೊಬ್ಬರಿಗೆ ವಿದೇಶದಲ್ಲಿ ಉದ್ಯೋಗ ನೀಡುವ ಭರವಸೆಯನ್ನು ನೀಡಿ ಲಕ್ಷಾಂತರ ರೂ. ವಂಚನೆ ಎಸಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಯನ್ನು ನಗರದ ಬಲ್ಮಠ ನಿವಾಸಿ ಜೆರಿ ಇಥಿಯಲ್ ಶಿಖಾ(32) ಎನ್ನಲಾಗಿದೆ.

ಕಾವೂರಿನ ಮಹಿಳೆಯೊಬ್ಬರು ವಿದೇಶದಲ್ಲಿ ಉದ್ಯೋಗ ಬಯಸಿ ಏಪ್ರಿಲ್ ತಿಂಗಳಲ್ಲಿ ನಗರದ ಜೆರಿ ಇಥಿಯಲ್ ಶಿಖಾ ಕಚೇರಿಗೆ ತೆರಳಿದ್ದ ವೇಳೆ ಅಲ್ಲಿ ಆರೋಪಿಯು ಯುರೋಪಿನ ಲಿಥುವೇನಿಯಾ ದೇಶದಲ್ಲಿ ಕಚೇರಿ ಕೆಲಸವೊಂದಕ್ಕೆ ನೌಕರರು ಬೇಕಾಗಿದ್ದಾರೆ. ತಿಂಗಳಿಗೆ 3.50 ಲಕ್ಷ ರೂ. ವೇತನ ದೊರೆಯಲಿದೆ.

ಆದರೆ ಈ ಉದ್ಯೋಗ ಸಿಗಬೇಕಾದರೆ 5.5 ಲಕ್ಷ ರೂ ವೆಚ್ಚ ತಗುಲುವುದಾಗಿ ಮಹಿಳೆಗೆ ಹೇಳಿದನಂತೆ. ಇದನ್ನು ನಂಬಿದ ಮಹಿಳೆ ತನ್ನ ಒಡವೆಗಳನ್ನು ಅಡವಿಟ್ಟು ಒಂದು ಲಕ್ಷ ರೂ. ನೇರವಾಗಿ ಹಾಗೂ ಒಂದು ಲಕ್ಷ ರೂ. ನೆಫ್ಟ್ ರೂಪದಲ್ಲಿ ಹಣವನ್ನು ಆರೋಪಿಗೆ ನೀಡಿದರು.

ಆ ಬಳಿಕ ಆರೋಪಿ ಸಂಬಂಧಪಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆಯದಿರುವುದು ಮಹಿಳೆಗೆ ತಿಳಿದುಬಂದಿದ್ದು, ವಿಷಯ ತಿಳಿದು ಮಹಿಳೆ ಹಣ ವಾಪಸ್ ಮಾಡುವಂತೆ ಕೇಳಿಕೊಂಡರೂ ಆರೋಪಿ ಹಣ ನೀಡದೇ ವಂಚಿಸಿದ್ದಾನೆ.

ಈ ಘಟನೆಯ ಬಗ್ಗೆ ಮಂಗಳೂರು ಬಂದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಆತನನ್ನು ಬಂಧಿಸಿದ ಬಳಿಕ ವಂಚನೆಗೊಳಗಾದ ಇಬ್ಬರು ಸಂತ್ರಸ್ತರು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!