Sunday, June 14, 2026
spot_imgspot_img
spot_imgspot_img

ಮಂಗಳೂರು: ವಿದ್ಯಾರ್ಥಿ ಪರಿಷತ್‌ನ ನಾಯಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ , ಹೊರದಬ್ಬಿದ ಪ್ರಾಂಶುಪಾಲರು

- Advertisement -
- Advertisement -
vtv vitla

ಮಂಗಳೂರು: ಕಾಲೇಜು ಸಮಸ್ಯೆಯ ಬಗ್ಗೆ ಮಾತನಾಡಲು ಹೋದಂತಹ ವಿದ್ಯಾರ್ಥಿ ಪರಿಷತ್‌ನ ನಾಯಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಂಶುಪಾಲರ ಕೊಠಡಿಯಿಂದ ಹೊರದಬ್ಬಿದ ಘಟನೆ ಕೆಪಿಟಿ ಕಾಲೇಜಿನಲ್ಲಿ ನಡೆದಿದೆ.

ಪ್ರಾಂಶುಪಾಲರ ನಡೆಯಿಂದ ಕೆರಳಿದ ವಿದ್ಯಾರ್ಥಿಗಳು ಕಾಲೇಜು ಮುಂಭಾಗ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಕೆಪಿಟಿ ಕಾಲೇಜಿನ ಪ್ರಾಂಶುಪಾಲರ ನಡೆಯಿಂದ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ. ನ್ಯಾಯಕ್ಕಾಗಿ ವಿದ್ಯಾರ್ಥಿಗಳು ಕಾಲೇಜಿನ ಹೊರಗಡೆ ಹೋರಾಟ ನಡೆಸಿದ್ದರು.

ವಿದ್ಯಾರ್ಥಿಗಳ ಸಮಸ್ಯೆಯ ಕುರಿತಾಗಿ KPT ಕಾಲೇಜಿನ ಪ್ರಾಂಶುಪಾಲರ ಬಳಿ ಚರ್ಚಿಸಲು ವಿದ್ಯಾರ್ಥಿ ಪರಿಷತ್ ನ ಪ್ರಮುಖ ಕಾರ್ಯಕರ್ತರು ತೆರಳಿದಾಗ ವಿದ್ಯಾರ್ಥಿಗಳನ್ನು ನಿಂದಿಸಿ , ಪರಿಷತ್ ನ ಕಾರ್ಯಕರ್ತರಿಗೆ ಕಾಲೇಜಿನ ವಿದ್ಯಾರ್ಥಿಗಳಿಂದ ಹೊಡೆಸುವುದಾಗಿ ಹೇಳಿದಾಗ ಕೆರಳಿದ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರು ಕಾಲೇಜಿನ ಮುಂಭಾಗದಲ್ಲೆ ಪ್ರತಿಭಟನೆಯನ್ನು ಪ್ರಾರಂಭಿಸಿದರು. ಪ್ರತಿಭಟನೆಗೆ ನಡೆಯುತ್ತಿದ್ದರು ಪ್ರಾಂಶುಪಾಲರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಎಬಿವಿಪಿ ನಾಯಕರು ಹೇಳಿದ್ದು, ಪ್ರತಿಭಟನಾ ಸ್ಥಳಕ್ಕೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆಗೆ ಕ್ಷಮೆಯಾಚಿಸಬೇಕಾಗಿ ಆಗ್ರಹಿಸಿದ್ದಾರೆ.

- Advertisement -

Related news

error: Content is protected !!