Wednesday, July 22, 2026
spot_imgspot_img
spot_imgspot_img

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಚಿನ್ನಾಭರಣ ಜಪ್ತಿ -ಕಾಸರಗೋಡು ನಿವಾಸಿ ವಶಕ್ಕೆ

- Advertisement -
- Advertisement -

ಮಂಗಳೂರು: ಅಕ್ರಮವಾಗಿ ಸಾಗಿಸಲು ಯತ್ನಿಸಿದ ವ್ಯಕ್ತಿಯೊಬ್ಬನಿಂದ 38,53,200 ರೂ. ಮೌಲ್ಯದ 741 ಗ್ರಾಂ ತೂಕದ 24 ಕ್ಯಾರೆಟ್‌ ಪರಿಶುದ್ಧ ಚಿನ್ನವನ್ನು ವಿಮಾನ ನಿಲ್ದಾಣದಿಂದ ಕಸ್ಟಮ್ಸ್ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ದುಬಾೖಯಿಂದ ಆಗಮಿಸಿದ ಕಾಸರಗೋಡು ನಿವಾಸಿ ಚಿನ್ನದ ಪೌಡರನ್ನು ಗಮ್‌ನಲ್ಲಿ ಮಿಕ್ಸ್‌ ಮಾಡಿ ಅದನ್ನು ಉಂಡೆ ಮಾಡಿ ಗುದದ್ವಾರದೊಳಗಿಟ್ಟು ಸಾಗಾಟ ಮಾಡಲು ಯತ್ನಿಸಿದ್ದಾನೆ. ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬಂದ ಕಾಸರಗೋಡು ನಿವಾಸಿ ಚಿನ್ನದ ಪೌಡರ್ ನ್ನು ಗಮ್‌ನಲ್ಲಿ ಮಿಕ್ಸ್‌ ಮಾಡಿ ಅದನ್ನು ಉಂಡೆ ಮಾಡಿ ಗುದದ್ವಾರದೊಳಗಿಟ್ಟು ಸಾಗಾಟ ಮಾಡಲು ಯತ್ನಿಸಿದ್ದಾನೆ. ಇನ್ನು ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಾನೂನು ಕ್ರಮ ಜರಗಿಸಲಾಗುವುದು ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

astr
- Advertisement -

Related news

error: Content is protected !!