Wednesday, July 2, 2025
spot_imgspot_img
spot_imgspot_img

ಮಂಗಳೂರು: ಸೌದಿಯಲ್ಲಿ ಪಾಸ್‌ಪೋರ್ಟ್ ಕೇಂದ್ರದ ಅಧಿಕಾರಿಗಳ ವಶದಲ್ಲಿದ್ದ ಉಳ್ಳಾಲ ನಿವಾಸಿ ತಾಯ್ನಾಡಿಗೆ ವಾಪಾಸ್

- Advertisement -
- Advertisement -

ಮಂಗಳೂರು: ಸುಮಾರು ಒಂದು ವರ್ಷದಿಂದ ಸೌದಿ ಅರೇಬಿಯಾದ ಪಾಸ್‌ಪೋರ್ಟ್ ಕೇಂದ್ರದ ಅಧಿಕಾರಿಗಳ ವಶದಲ್ಲಿದ್ದ ಉಳ್ಳಾಲದ ನಿವಾಸಿ ಇಮ್ರಾನ್ ಹಂಝಾ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.

ಸೌದಿ ಪಾಸ್‌ಪೋರ್ಟ್ ಅಧಿಕಾರಿಗಳು ಹಳೆಯ ಪರಾರಿ ಸಿವಿಲ್ ಪ್ರಕರಣದಲ್ಲಿ ವಶಕ್ಕೆ ತೆಗೆದುಕೊಂಡಿದ್ದರು.

ಇಮ್ರಾನ್ ಸುಮಾರು ಒಂದು ವರ್ಷದ ಹಿಂದೆ ದಮ್ಮಾಮ್‌ನಿಂದ ಬಹ್ರೇನ್‌ಗೆ ವಾರ್ಷಿಕ ರಜೆಯ ನಿಮಿತ್ತ ಪ್ರಯಾಣ ಬೆಳೆಸಿದ್ದರು. ಅಲ್ಲಿ ಅಧಿಕಾರಿಗಳು ಹರೂಬ್ ಪ್ರಕರಣ ದಾಖಲಿಸಿರುವುದು ಕಂಡುಬಂದಿತ್ತು.

ಈ ಪ್ರಕರಣ ವಕೀಲ ಪಿ.ಎ. ಹಮೀದ್‌ ಪಡುಬಿದ್ರಿ ಅವರ ಗಮನಕ್ಕೆ ಬಂದಿದ್ದು, ಬುರೈದ್ ಪ್ರಾಂತ್ಯದಲ್ಲಿ ಸಮಾಜ ಸೇವಕ ಅಬ್ದುಲ್ ಲತೀಫ್ ಪಾಣೆಮಂಗಳೂರು ಹಾಗೂ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಅಝೀಝ್ ಕಲ್ಲಡ್ಕ ಅವರಿಗೆ ತಿಳಿಸಿದ್ದರು.

ಎಲ್ಲರ ಪ್ರಯತ್ನಗಳ ನಂತರ, ಭಾರತೀಯ ರಾಯಭಾರ ಕಚೇರಿಯ ಸಹಕಾರದೊಂದಿಗೆ ಇಮ್ರಾನ್ ಅವರನ್ನು ಜವಾಝತ್‌ ಕೇಂದ್ರದಿಂದ ಬಿಡುಗಡೆ ಮಾಡಲಾಯಿತು.

- Advertisement -

Related news

error: Content is protected !!