Wednesday, June 17, 2026
spot_imgspot_img
spot_imgspot_img

ಮಂಗಳೂರು: ಭೀಕರ ಅಪಘಾತ; ರಸ್ತೆಗೆ ಬಿದ್ದ ಸ್ಕೂಟರ್‌ ಸವಾರನ ಮೇಲೆ ಹರಿದ ಲಾರಿ- ಸವಾರ ಸ್ಥಳದಲ್ಲೇ ಮೃತ್ಯು..!!

- Advertisement -
- Advertisement -

ಮಂಗಳೂರು: ನಗರ ಹೊರವಲಯದ ಪಣಂಬೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದ ರಸ್ತೆ ಅಪಘಾತಕ್ಕೆ ಸ್ಕೂಟರ್‌ ಸವಾರರೊಬ್ಬರು ಬಲಿಯಾದ ಘಟನೆ ನಡೆದಿದೆ.

ಸ್ಕೂಟರ್‌ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಸ್ಕೂಟರ್‌ ರಸ್ತೆಯ ಹೊಂಡಕ್ಕೆ ಬಿದ್ದಿದ್ದು, ಸವಾರ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿಯಿಂದ ಬಂದ ಸರಕು ತುಂಬಿದ ಲಾರಿ ರಸ್ತೆಯಲ್ಲಿ ಬಿದ್ದಿದ್ದ ಸ್ಕೂಟರ್‌ ಮತ್ತು ಸವಾರನ ಮೇಲೆ ಚಲಿಸಿದೆ. ಇದರಿಂದ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ಸ್ಕೂಟರ್ ಸವಾರನ ಗುರುತು ಪತ್ತೆಯಾಗಿಲ್ಲ.

ಮಂಗಳೂರು ನಗರ ಉತ್ತರ ಟ್ರಾಫಿಕ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸಹಿತ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಮಳೆಯಿಂದಾಗಿ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಮರಣಾಂತಿಕವಾಗಿ ಪರಿಣಮಿಸಿವೆ.

- Advertisement -

Related news

error: Content is protected !!